
ರಾಯಚೂರು:ನಗರದ ದೇವದುರ್ಗದ ಬೆಣಕಲ್ ಗ್ರಾಮದ ಬಳಿಯಿದ್ದ ಅಣೇಲಿಂಗೇಶ್ವರ ದೇವಸ್ಥಾನದ ನಿಧಿ ಆಸೆಗಾಗಿ ಬಸವ ಮೂರ್ತಿಯನ್ನು ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕಲುಬುರಗಿಯ ಸೋಮು ಮತ್ತು ಜಮಖಂಡಿ ತಾಂಡದ ಭೀಮು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ರಾಯಚೂರಿನ ದೇವದುರ್ಗದ ಬೆಣಕಲ್ ಗ್ರಾಮದ ಬಳಿ ಇರುವ ಅಣೇಲಿಂಗೇಶ್ವರ ದೇವಾಸ್ಥಾನದಲ್ಲಿ ನಡೆದಿದೆ. ದೇವಸ್ಥಾನದಲ್ಲಿದ್ದ ಬಸವನ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
