ಬಂಟ್ವಾಳ : ಪಾಣೆಮಂಗಳೂರು ರೈತರ ಸೇವಾ ಸಂಘ ನಿ. ಇದರ ನೂತನ ಬೊಳ್ಳಾಯಿ ಶಾಖೆಯು ಸಜಿಪಮೂಡ ಗ್ರಾಮದ ಪಣೋಲಿಬೈಲಿನ ಶ್ರೀ ರಾಮ ವಾಣಿಜ್ಯ ಸಂಕೀರ್ಣದಲ್ಲಿ 08-03-2018ರ ಗುರುವಾರದಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೇದಮೂರ್ತಿ ಶಿವರಾಮಯ್ಯ ತಣ್ಣಲಚ್ಚಿಲ್ ರವರ ಪೌರೋಹಿತ್ಯದಲ್ಲಿ ಊರಿನ ಹಿರಿಯರಾದ ಪ್ರಗತಿಪರ ಕೃಷಿಕ ವಸಂತ ಶೆಟ್ಟಿ , ಕಟ್ಟಡ ಮಾಲಕ ಜಯರಾಮ ಹೆಗ್ಡೆ , ರೈತರ ಸೇವಾ ಬ್ಯಾಂಕಿನ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ದೀಪ ಬೆಳಗಿಸಿದರು.

KAR_7649
ಉಪಾಧ್ಯಕ್ಷ ಕೇಶವ ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ್ ಪ್ರಭು , ನಿರ್ದೇಶಕರುಗಳಾದ ಪ್ರೇಮನಾಥ ಶೆಟ್ಟಿ, ನಾಗೇಶ್, ಜ್ಞಾನೇಶ್ವರ ಪ್ರಭು ಬೋಳಂಗಡಿ, ಶ್ರೀನಿವಾಸ್ ಭಟ್ ಎನ್., ಪ್ರದೀಪ್ ಶೆಟ್ಟಿ , ನಾಗಪ್ಪ ನಾಯ್ಕ , ಸಂಜೀವ ಬಂಗೇರಾ, ಮಮತಾ ಶಾಂತಿಲ, ಮೋಹಿನಿ ಜೆ.ಶೆಟ್ಟಿ , ಪ್ರಮುಖರಾದ ಪ್ರಗತಿಪರ ಕೃಷಿಕ ಕೃಷ್ಣ ಭಟ್ ಕೋಮಾಲಿ, ಮಾಜಿ ನಿರ್ದೇಶಕ ಪಾಂಡುರಂಗ ಪ್ರಭು, ಅಣ್ಣು ನಾಯ್ಕ, ಇದಿನಬ್ಬ , ಗುತ್ತಿಗೆದಾರ ಶೈಲೇಶ್, ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *