ನರೇಂದ್ರ ಮೋದಿ ಬಗ್ಗೆ ಚಿತ್ರ ನಿರ್ದೇಶಿಸಲಿದ್ದಾರೆ ರೂಪ ಐಯ್ರ್

ನಟಿ ಮತ್ತು ನಿರ್ದೇಶಕಿ ರೂಪ ಅಯ್ಯರ್ ಅವರು ಇದೀಗ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ.

ನಮೋ ಹೆಸರಿನಲ್ಲಿ ಸೆಟ್ಟೇರುವ ಚಿತ್ರಕ್ಕೆ ರೂಪ ಅಯ್ಯರ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಚಿತ್ರದ ಹೆಸರನ್ನು ಬಿಟ್ಟರೆ ಉಳಿದ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ.

ಅಂದ ಹಾಗೆ ರೂಪ ಅಯ್ಯರ್ ಅವರು ನಿರ್ದೇಶನ ಮಾಡುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಮುಖಪುಟ, ಚಂದ್ರ ಮತ್ತು ಕಲರ್ಸ್ ಎಂಬ ಚಿತ್ರಗಳಿಗೆ ಅವರು ದಿಗ್ದರ್ಶನ ಮಾಡಿದ್ದರು.

ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯಕ್ಕೆ ಧುಮುಕಲು ಕೂಡ ರೂಪ ಅಯ್ಯರ್ ಸಜ್ಜಾಗಿದ್ದರು. ಕೆಪಿಜೆಪಿ ಪಕ್ಷದಿಂದ ಕೆಆರ್ ನಗರದ ಅಭ್ಯರ್ಥಿಯಾಗಿ ಕಣಕ್ಕಿಳಿದು ರಾಜಕಾರಣ ಮಾಡಲು ಅಣಿಯಾಗಿದ್ದರು. ಆದರೀಗ ಪಕ್ಷದಿಂದ ಉಪೇಂದ್ರ ಅವರೇ ಹೊರಬಂದಿದ್ದು ಮುಂದಿನ ನಡೆ ನಿಗೂಢವಾಗಿದೆ.

ಇದರ ಬೆನ್ನಲ್ಲೇ ಮೋದಿ ಅವರ ಹೆಸರಿನಲ್ಲಿ ಚಿತ್ರ ನಿರ್ದೇಶನ ಮಾಡಲು ಅಣಿಯಾಗುತ್ತಿರುವುದನ್ನು ನೋಡಿದರೆ ಬಿಜೆಪಿಯತ್ತ ಹೆಜ್ಜೆ ಹಾಕಲಿದ್ದಾರೆಯೇ ಎಂಬ ಶಂಕೆ ಕೂಡ ಮೂಡಿದೆ.

By suddi9

Leave a Reply

Your email address will not be published. Required fields are marked *