ಅಡ್ಡೂರು: ರಿಫಾಯಿ ಇರ್ಷಾದುಸುಬ್ಬಾನ್ ಎಸೋಸಿಯೇಶನ್ ವತಿಯಿಂದ ಮಾ.10ರಂದು 24ನೇ ವಾರ್ಷಿಕ “ದಫ್ ರಾತೀಬ್ ಕಾರ್ಯಕ್ರಮ” ಇಲ್ಲಿನ ಕೆಳಗಿನಕೆರೆಯ ಬದ್ರಿಯಾ ಮಸೀದಿಯಲ್ಲಿ ಆಯೋಜಿಸಲಾಗಿದೆ.
ಅಂದು ಅಸರ್ ನಮಾಝಿನ ಬಳಿಕ ನಡೆಯಲಿರುವ “ಮೊಹಿಯುದ್ದೀನ್ ರಾತೀಬ್” ಕಾರ್ಯಕ್ರಮದಲ್ಲಿ ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಕೆ.ಎಂ.ಮೊಹಮ್ಮದ್ ಶರೀಫ್ ದಾರಿಮಿ ದುಆಶೀರ್ವಚನ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಅಬೂಬಕ್ಕರ್ ಉಸ್ತಾದ್ ವಹಿಸಲಿದ್ದಾರೆ. ಈ ವೇಳೆ ಪೊಳಲಿ ಬಾಬಾ ಫಕ್ರುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಖಾದರ್ ಫೈಝಿ ಹಾಗೂ ಕೆಳಗಿನಕೆರೆ ಮುಅಲ್ಲಿಂ ಇಸ್ಮಾಯೀಲ್ ಮುಸ್ಲಿಯಾರ್ ಉಪಸ್ಥಿತರಿರುವರು. ಬಳಿಕ ಮಗ್ರಿಬ್ ನಮಾಝಿನ ಬಳಿಕ ಅಬೂಬಕ್ಕರ್ ಉಸ್ತಾದ್ ನೇತೃತ್ವದಲ್ಲಿ “ರಿಫಾಯಿ ದಫ್ ರಾತೀಬ್” ನಡೆಯಲಿದೆ.
ರಾತ್ರಿ 8ಕ್ಕೆ ನಡೆಯುವ ಸಮಾರಂಭ ಕಾರ್ಯಕ್ರಮವನ್ನು ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಕೆ.ಎಂ.ಮೊಹಮ್ಮದ್ ಶರೀಫ್ ದಾರಿಮಿ ಉದ್ಘಾಟಿಸಲಿದ್ದು, ಅಸಯ್ಯದ್ ಫಕ್ರುದ್ದೀನ್ ತಂಙಳ್ ದಾರಿಮಿ ಅಲ್ ಅಸನಿ ದುಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿ.ಸೈಯದ್ ತೋಕೂರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಎ.ಮೊಯಿದ್ದೀನ್ ಬಾವಾ ಹಾಗೂ ಜಿ.ಪಂ. ಸದಸ್ಯ ಯು.ಪಿ.ಇಬ್ರಾಹೀಂ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಸೀದಿಯ ಆಡಳಿ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

