Sexual_Assault_boy_Mar07-300x225

ಹೈದರಾಬಾದ:  ಅಪ್ರಾಪ್ತ ಬಾಲಕನ ಮೇಲೆ ಮದರಸಾ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನಡೆಸಿದ ಪ್ರಕರಣ ವರದಿಯಾಗಿದೆ.

ತನ್ನ  ಒಂಭತ್ತು ವರ್ಷದ ಪುತ್ರನ ಮೇಲೆ ಅರೇಬಿಕ್ ಶಿಕ್ಷಕ  ಇರ್ಫಾನ್ (22) ಎಂಬಾತ ಲೈಂಗಿಕ ದೌರ್ಜನ್ಯ   ಎಸಗಿರುವುದಾಗಿ ಆತನ ತಂದೆ ದೂರು ನೀಡಿದ್ದಾರೆ ಎಂದು ಫಲ್ಕನುಮಾ ಸಹಾಯಕ ಪೊಲೀಸ್ ಆಯುಕ್ತ ಸಯ್ಯದ್ ಫಯಾಜ್ ತಿಳಿಸಿದ್ದಾರೆ.

ಮದರಸಾದಲ್ಲಿನ ಬಾತ್ ರೂಂ ಗೆ ಕರೆದೊಯ್ದು ಶಿಕ್ಷಕ  ಈ ಕೃತ್ಯ  ಎಸಗಿದ್ದು, ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 5 ಮತ್ತು 6 ರಡಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

By suddi9

Leave a Reply

Your email address will not be published. Required fields are marked *