ಕೋಲಾರ: ಕಾರು ಹರಿದು ಒಂದು ವರ್ಷದ ಮಗು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದ ಘಟನೆ ನಗರದ ಗಲ್ ಪೇಟೆ ಬಡಾವಣೆಯಲ್ಲಿ ಸೋಮವಾರ ನಡೆದಿದೆ.
ನಯೀಮ್ ಎಂಬವರ ಪುತ್ರ ಇಕ್ರಂ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.
ನಯೀಮ್ ಅವರ ಪತ್ನಿ ನೀರು ತರಲು ತೆರಲಿದ್ದ ವೇಳೆ ಇಕ್ರಂ ಜತೆಗಿದ್ದನು. ಬಳಿಕ ಇಕ್ರಂ ಆಕಸ್ಮಿಕವಾಗಿ ರಸ್ತೆಗೆ ಇಳಿದಿದ್ದರಿಂದ ಚಲಿಸುತ್ತಿದ್ದ ಕಾರಿಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನೂ ದಾರುಣ ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

