ಅಡ್ಡೂರು: ಹಿಂದೂ ಜಾಗರಣ ವೇದಿಕೆ ಅಡ್ಡೂರು ವತಿಯಿಂದ 25ನೇ ವರ್ಷದ “ಶನೀಶ್ವರ ಪೂಜೆ” ಹಾಗೂ “ಭಜನಾ ಮಂಗಲೋತ್ಸವ” ಮಾ.10ರಿಂದ ಇಲ್ಲಿನ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆಯಲಿದೆ.
ಮಾ.10ರಂದು ಕೋಡಿಮಜಲು ತಂತ್ರಿ ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಉಪಾಧ್ಯಾಯ ನೇತೃತ್ವದಲ್ಲಿ ಬೆಳಗ್ಗೆ 8;30ಕ್ಕೆ ಪವಮಾನ ಅಭಿಷೇಕ, 9ಕ್ಕೆ ಗಣಯಾಗ, 9;30ಕ್ಕೆ ಶನಿಪೂಜೆ ಹಾಗೂ ಮಧ್ಯಾಹ್ನ 12;30ಕ್ಕೆ ಮಹಾಪೂಜೆ ನಡೆಯಲಿದೆ. ಬಳಿಕ ಸಂಜೆ 6ರಿಂದ ಭಜನೆ, 8ರಿಂದ ಆಶ್ಲೇಷಾ ಬಲಿ ಪೂಜೆ ಹಾಗೂ 9ರಿಂದ ರಂಗಪೂಜೆ ನೆರವೇರಲಿದೆ.
ಮಾ.11ರಮದು ಬೆಳಗ್ಗೆ ಮುಖ್ಯಪ್ರಾಣ ದೇವರಿಗೆ 108 ಸೀಯಳ ಅಭಿಷೇಕ ಮೂಲಕ ಭಜನಾ ಮಂಗಲೋತ್ಸವ ಸಮಾಪ್ತಿಗೊಳ್ಳಲಿದ್ದು, ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ಕೋರಿದೆ.

