ಕೈಕಂಬ: ಗುರುಪುರ ಕೈಕಂಬ ಸಮೀಪ ಗುರುಕಂಬ್ಳ ರಾಷ್ಟ್ರೀಯ ಹೆದ್ಧಾರಿಯಲ್ಲಿ ಬೈಕ್‍ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಎಡಪದವು ಪಾಡ್ಯಾರ್ ನಿವಾಸಿ ಭೋಜ ಆಚಾರ್ಯ ಅವರ ಮಗ ದಿನೇಶ್ ಆಚಾರ್ಯ (46) ಮೃತಪಟ್ಟ ದುರ್ದೈವಿ.IMG-20180303-WA0049

ದಿನೇಶ್ ತನ್ನ ಬೈಕ್ ನಲ್ಲಿ ಶನಿವಾರ ಯಾವುದೋ ಕೆಲಸದ ನಿಮಿತ್ತ ಕೈಕಂಬಕ್ಕೆ ತೆರಲಿ ವಾಪಸ್ ಎಡಪದವಿಗೆ ಬರುತ್ತಿದ್ದ ವೇಳೆ ಗುರುಕಂಬ್ಳ ಉರ್ದು ಶಾಲೆಯ ಸಮೀಪ ಕೈಕಂಬದತ್ತ ಹೋಗುತ್ತಿದ್ದ ಟಿಪ್ಪರ್ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದು ಗಂಭೀರ ಗಾಯ ಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ದಿನೇಶ್ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದು ಎಡಪದವಿನಲ್ಲಿ  ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಅವರು  ವಿಶ್ವಕರ್ಮ ಫರ್ನಿಚರ್  ಅಂಗಡಿ ಹೊಂದಿದ್ದರು. ಹದಿನೈದು ದಿನಗಳ ಹಿಂದೆ ತನ್ನ ನೂತನ ಮನೆಯ ಗ್ರಹಪ್ರವೇಶ ಮಾಡಿಸಿದ್ದರು. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *