ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ ಬಯೋ ಟೆಕ್ನಾಲಜಿ ವಿಭಾಗದ ಫ್ರೋಫೆಸರ್ ಡಾ| ಮೋನಿಕಾ ಸದಾನಂದ ಅವರ ಮಾರ್ಗದರ್ಶನದಲ್ಲಿ ಬಯೋಟೆಕ್ನಾಲಜಿ ಸಂಶೋಧನಾ ಅಧ್ಯಯನ ನಡೆಸಿದ ರೇಶ್ಮಾ ಎ. ಶೆಟ್ಟಿ ಅವರು ಎಪಿಜೆನೆಟಿಕ್ ಎಂಡ್ ಎನ್‍ವೈರೊನ್‍ಮೆಂಟಲ್ ಇನ್‍ಫ್ಲುಯೆನ್ಸಸ್ ಓನ್‍ಎ ಜೆನೆಟಿಕ್ ಮೋಡೆಲ್ ಆಫ್ ಎಡೊಲೆಸೆಂಟ್‍ಡಿಪ್ರೆಶನ್ (EPIGENETIC AND ENVIRONMENTAL INFLUENCES ON A GENETIC MODEL OF ADOLESCENT DEPRESSION) ಮಂಗಳೂರು ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯ ಪಿಎಚ್‍ಡಿ ಪದವಿ ನೀಡಿದೆ.
ರೇಶ್ಮಾ ಎ.ಶೆಟ್ಟಿ ಅವರು ಮಂಗಳೂರು ನ್ಯಾಯವಾದಿ ಅರುಣ್ ಶೆಟ್ಟಿ ಅವರ ಪತ್ನಿಯಾಗಿರುವರು.

