ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀರಾಮ ಭಜನಾ ಮಂದಿರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಉತ್ಸವದಲ್ಲಿ ಯುವಕರು ಕಂಬವನ್ನೇರಿ ಮಡಿಕೆ ಒಡಯುತ್ತಿರುವ ಆಕರ್ಷಕ ದೃಶ್ಯ ಕಂಡು ಬಂದಿದೆ.
ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀರಾಮ ಭಜನಾ ಮಂದಿರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ 82ನೇ ವರ್ಷದ ಮೊಸರುಕುಡಿಕೆ ಉತ್ಸವವು ಆಕರ್ಷಕ ಶೋಭಾಯಾತ್ರೆಯೊಂದಿಗೆ ಸಂಭ್ರಮ ಸಡಗರದಿಂದ ನಡೆಯಿತು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀಕೃಷ್ಣನ ಭಾವಚಿತ್ರವನ್ನು ಪಲ್ಲಕಿಯಲ್ಲಿರಿಸಿದ ಭಕ್ತರು ಭಜನೆಯೊಂದಿಗೆ ಮೆರವಣಿಗೆ ನಡೆಸಿ ಸಂಭ್ರಮ ಪಟ್ಟರು. ಇದೇ ವೇಳೆ ನಡೆದ ಆಕರ್ಷಕ ಶೋಭಾಯಾತ್ರೆಯಲ್ಲಿ ನೂರಾರು ಮಂದಿ ಪುಟಾಣಿಗಳು ಶ್ರೀಕೃಷ್ಣನ ವೇಷಧಾರಿಯಾಗಿ ಗಮನ ಸೆಳೆದರು. ಇನ್ನೊಂದೆಡೆ ಕಲ್ಲಡ್ಕ ಶಿಲ್ಪ ಗೊಂಬೆ ಬಳಗದ ಶ್ರೀ ಕೃಷ್ಣ ಮಂದಿರ, ಸಂಗೀತ ಗೋಷ್ಟಿ, ಹರೇ ರಾಮ ಹರೇ ಕೃಷ್ಣ ಬಳಗ, ಭಜರಂಗದಳದ ಹುಲಿ ವೇಷ, ವಿಶ್ವ ಹಿಂದೂ ಪರಿಷತ್ನ ಶಿವಾಜಿ ರಥಯಾತ್ರೆ, ತ್ರಿಶೂಲ್ ಫ್ರೆಂಡ್ಸ್ ರಾಯಪ್ಪರಕೋಡಿ ತಂಡದಿಂದ ವಾಲಿ ಸುಗ್ರೀವ ಕಾಳಗ, ನೇತಾಜಿ ಯುವಕ ಮಂಡಲದ ವನದೇವತೆ, ಬೇಟೆಗಾರರು ಮತ್ತಿತರ ಸ್ತಬ್ದಚಿತ್ರಗಳು ಜನಾಕರ್ಷಣೆ ಪಡೆಯಿತು.
ಹೆದ್ದಾರಿ ಉದ್ದಕ್ಕೂ ರಸ್ತೆ ಬದಿ ಅಳವಡಿಸಿದ್ದ ಬೃಹತ್ ಗಾತ್ರದ ಕಂಬಗಳಲ್ಲಿ ಸಾಲು ಸಾಲು ಮಡಿಕೆಗಳನ್ನು ಯುವಕರು ಉತ್ಸಾದಿಂದ ಒಡೆಯುತ್ತಿರುವ ದೃಶ್ಯವನ್ನು ಸಾವಿರಾರು ಮಂದಿ ಭಕ್ತರು ವೀಕ್ಷಿಸುತ್ತಾ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಆರ್ ಎಸ್ ಎಸ್ ಮುಖಂಡ ಡ. ಕೆ.ಪ್ರಭಾಕರ್ ಭಟ್, ಮಾಜಿ ಶಾಸಕರಾದ ಎ. ರುಕ್ಮಯ್ಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಮಂದಿರ ಜೀಣರ್ೋದ್ದಾರ ಸಮಿತಿ ಕಾಯರ್ಾಧ್ಯಕ್ಷ ಜಿತೇಂದ್ರ ಎಸ್.ಕೊಟ್ಟಾರಿ, ಸಮಿತಿ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಕಾರ್ಯದಶರ್ಿ ಕೃಷ್ಣಪ್ಪ, ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರ್, ಆನಂದ ಎ.ಶಂಭೂರು ಮತ್ತಿತರರು ಇದ್ದರು.
ಡಿವೈಎಸ್ಪಿ ರಶ್ಮಿ ಪೆರಡಿ, ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ನಗರ ಠಾಣಾಧಿಕಾರಿ ನಂದಕುಮಾರ್ ನೇತೃತ್ವದ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.

