ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಪಳ್ಳಿ-ನಿಂಜೂರಿನ ಕೊಡಮಣಿದಾಯೆ ದೈವಸ್ಥಾನದ ಎರಡು ಸ್ಥಂಭಗಳ ಮೇಲೆ ಎರಡು ಶಾಸನಗಳನ್ನು ಬರೆಸಲಾಗಿದೆ. ಕನ್ನಡ ಭಾಷೆ ಮತ್ತು ಲಿಪಿಯಲ್ಲಿರುವ ಈ ಎರಡು ಶಾಸನಗಳು ಚಾರಿತ್ರಿಕ ಮತ್ತು ಜಾನಪದ ಅಧ್ಯಯನ ದೃಷ್ಠಿಯಿಂದ ಅತ್ಯಂತ ಮಹತ್ವದ ದಾಖಲೆಗಳಾಗಿವೆ.
ಶಾಸನದ ಪಾಠಗಳು
ಕಂಭ – 1
1. ತಾ 13-4
2. 1896 ನೆಯ
3. ನಿಂಜೂರು
4. ಚಿತಾರ ಬೈ
5. ಲು ಕಾವೇರಿ
6. ಮಗಳೂ
7. ಊಂಮಕ
8. ಮಹ ಕೂ
9. ಡು ಮಂತಾ
10. ಯ ನಾಗರ
11. ಅಂಚೂ
12. ಹಾಕಿಸಿದು
13. ತಾ. 23-11-96
14. 80

IMG_20171103_100419

ಕಂಭ – 2

1. ತಾ 21-12
2. 1897 ನಿಯಿ
3. ನಿಂಜೂರು ಚಿ
4. ತಾರ ಬೈಲು ಕಾ
5. ವೇರಿ ಮಗ ಅ
6. ಂಣಪ ಮಹ
7. ಕುಡುಮಂತಾ
8. ಯಾ ಗೋಪುರ
9. ಕಂಬಾ ಯೆರಡು
10. ಪ-ನ-ಪ್ರ
11. ಆಚರ
12. 18

ಮೇಲಿನ ಎರಡೂ ಶಾಸನಗಳು ಸ್ಥಳೀಯ ಸಾಂಸ್ಕøತಿಕ ಚರಿತ್ರೆಯ ಅಧ್ಯಯನದ ದೃಷ್ಠಿಯಿಂದ ತುಂಬಾ ಬೆಲೆಯುಳ್ಳ ದಾಖಲೆಗಳು. 1896 ಮತ್ತು 1897 ರ ಶಾಸನಗಳು ನಿಂಜೂರು ಚಿತ್ತಾರಿ ಬೈಲಿನ ಬಂಟ ಸಮುದಾಯದ ಕಾವೇರಿಂiÀiನ್ನು ಹೆಸರಿಸುತ್ತವೆ. ಈ ಕಾವೇರಿಯ ಮಗಳು ಉಮ್ಮಕ್ಕ ಮತ್ತು ಮಗ ಅಣ್ಣಪ್ಪ ಎಂಬುವರು ನಿಂಜೂರಿನಲ್ಲಿರುವ ಕೊಡಮಣಿದಾಯೆ ಎಂಬ ದೈವದ ದೈವಸ್ಥಾನದ ಜೀಣೋದ್ಧಾರಕ್ಕೆ ನೀಡಿದ ಕೊಡುಗೆಯನ್ನು ದಾಖಲಿಸುತ್ತವೆ.

IMG_20171103_100359
ಕಂಭ – 1ರ ಶಾಸನ, ನಿಂಜೂರು ಚಿತ್ತಾರಿ ಬೈಲಿನ ಕಾವೇರಿಯ ಮಗಳು ಉಮ್ಮಕ್ಕ ಮಹಾ ಕೊಡಮಣಿತ್ತಾಯ ದೈವಸ್ಥಾನದ ನಾಗರಕ್ಕೆ ಹೆಂಚು ಹಾಕಿಸಿದ್ದನ್ನು ದಾಖಲಿಸಿದೆ. ಬಹುಶಃ ಅದರ ಬಾಬ್ತು ರೂಪಾಯಿ 80.
ಕಂಭ – 2ರ ಶಾಸನ, ನಿಂಜೂರು ಚಿತ್ತಾರಿ ಬೈಲಿನ ಕಾವೇರಿಯ ಮಗ ಅಣ್ಣಪ್ಪ ಮಹಾ ಕೊಡಮಂತಾಯ ದೈವಸ್ಥಾನಕ್ಕೆ ನೀಡಿದ ಎರಡು ಕಂಭದ ಕೊಡುಗೆಯನ್ನು ದಾಖಲಿಸುತ್ತದೆ. ಬಹುಶಃ ಅದರ ಬಾಬ್ತು ರೂಪಾಯಿ 18. ಕಂಭಗಳನ್ನು ಮಾಡಿದವನು ಪಳ್ಳಿಯ ನಕ್ರ ಆಚಾರಿ.
ಸುಮಾರು 120 ವರ್ಷಗಳ ಹಿಂದೆ ಪಳ್ಳಿ ನಿಂಜೂರಿನ ಚಿತ್ತಾರಿ ಬೈಲಿನ ಬಂಟ ಸಮುದಾಯದ ಹಿರಿಯ ಮಹಿಳೆ ಕಾವೇರಿಯನ್ನು ಈ ಶಾಸನಗಳು ಉಲ್ಲೇಖಿಸುವುವುದರ ಮೂಲಕ ಬಂಟ ಸಮುದಾಯದಲ್ಲಿ ಪ್ರಚಲಿತವಾಗಿರುವ ಮಾತೃ ಮೂಲ ಸಂಸ್ಕøತಿಯನ್ನು ಈ ಶಾಸನಗಳು ದೃಢಪಡಿಸುತ್ತವೆ. ಶಾಸನೋಕ್ತ ನಿಂಜೂರಿನ ಕೊಡಮಣಿತಾಯ ದೈವಸ್ಥಾನ, ಈಗಲೂ ಚಿತ್ತಾರಿ ಬೈಲಿನ ಬಂಟ ಸಮುದಾಯದವರ ವಶದಲ್ಲಿಯೇ ಇರುವುದು ಆ ಮನೆತನದ ಪ್ರಾಚೀನತೆಯ ಅಧ್ಯಯನ ದೃಷ್ಠಿಯಿಂದ ಮಹತ್ವದ ಸಂಗತಿಯಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಶಾಸನಾಧ್ಯಯನದಲ್ಲಿ ಸಹಕರಿಸಿದ ತೃತೀಯ ಬಿ.ಎ. ಪುರಾತತ್ವ ವಿದ್ಯಾರ್ಥಿಗಳಾದ ಅಶೋಕ್, ಕಾರ್ತಿಕ್, ಕೀರ್ತನ್ ಹಾಗೂ ಪ್ರಪುಲ್ ಮತ್ತು ಕುತ್ಯಾರಿನ ಪ್ರಸಾದ್ ರವರಿಗೆ ನಾನು ಅಭಾರಿಯಾಗಿದ್ದೇನೆ.
ದಿ. 24.01.2018. ಪ್ರೊ. ಓ. ಮುರುಗೇಶಿ

By suddi9

Leave a Reply

Your email address will not be published. Required fields are marked *