ಕುಡುಪು:ಪೃಕೃತಿಯನ್ನುರಕ್ಷಣೆ ಮಾಡಿಕೊಂಡು ಬಂದ ನಮ್ಮ ಪೂರ್ವಜರು ದೈವದೇವರ ಆರಾಧನೆ, ಭೂತಾರಾಧನೆ, ನಾಗರಾಧನೆ ಆಚರಿಸುತ್ತಾ ಬಂದಿರುತ್ತಾರೆ. ಅದರಲ್ಲಿ ನಂಬಿಕೆ ಇರಬೇಕು. ಪ್ರಕೃತಿ ಬದಲಾವಣೆಯಿಂದ ರೋಗರುಜಿನಗಳು ಉಂಟಾಗುತ್ತದೆ. ಎಲ್ಲಾ ರೋಗಗಲಿಗೆ ಪರಿಹಾರವು ಇದೆ.ನಮ್ಮ ರಕ್ಷಣೆಗೆ ನಾಗರಾಧನೆ ಅತೀ ಮುಖ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದರು.24-1

24-2

ಅವರುಕುಡುಪು ಶ್ರೀ ಅನಂತಪದ್ಮನಾಭದೇವಸ್ಥಾನದ ಬ್ರಹ್ಮಕಲಶೋ ತ್ಸವದ ಪ್ರಯುಕ್ತ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ವಾನ್ ಪಂಜ ಭಾಸ್ಕರ ಭಟ್ ಧರ್ಮಿಕ ಉಪನ್ಯಾಸ ನೀಡಿದರು.24-3

ಮುಖ್ಯ ಅಥಿತಿಯಾಗಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಭಯಚಂದ್ರ ಜೈನ್, ಪತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪೊಳಲಿ ಜಯರಾಮ್ ಭಟ್, ಮಂಬೈ ಉದ್ಯಮಿಗಳಾದ ಸೀತಾರಾಮ ಜಾಣು ಶೆಟ್ಟಿ, ಕಡ್ಪಿ ಜಗದೀಶ್ ಶೆಣ್ಯೆ, ದೇವಳದ ಮೊಕ್ತೇಸರ ಭಾಸಕರ ಕೆ.ಸುದರ್ಶನ ಕುಡುಪು,ನರಸಿಂಹ ತಂತ್ರಿ, ಕೃಷ್ಣರಾಜ ತಂತ್ರಿ,ಚಂದ್ರಾಹಾಶ ರೈ , ಶರಣ್ ಪಂಪ್ ವೆಲ್, ರಾಜೇಶ್ ಕೊಟ್ಟಾರಿ,ಕರುಣಾಕರ ಭಟ್, ರವೀಶ ಸುವರ್ಣ, ನಾಗೇಶ್ ಕೋಟ್ಯಾನ್,ಓಂಪ್ರಕಾಶ್ ಶೆಟ್ಟಿ,ಸುಂದರ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಹಲಾವರನ್ನು ಸನ್ಮಾನಿಸಲಾಯಿತು. ವಾಸುದೇವ ಭಟ್ ಸ್ವಾಗತಿಸಿ, ಸುಧಾಕರ ರಾವ್ ಪೇಜವರ ನಿರೂಪಿಸಿದರು. ಶರತ್ ಶೆಟ್ಟಿ ವಂದಿಸಿದರು.

By Suddi9

Leave a Reply

Your email address will not be published. Required fields are marked *