ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ಪರಮಾಪ್ತರ ಶಿವಗಂಗಾ ಶ್ರೀನಿವಾಸ್ ಹಾಗೂ ಶಿವಗಂಗಾ ಬಸವರಾಜ್ ಮನೆ, ಕಚೇರಿ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ಶಿಕ್ರವಾರ ದಾಳಿ ನಡೆಸಿದ್ದಾರೆ.
ಇಲ್ಲಿನ ವಿದ್ಯಾನಗರ ಆಂಜನೇಯ ಬಡಾವಣೆ ಯ 16 ನೇ ಕ್ರಾಸ್ ನಲ್ಲಿರುವ ಶಿವಗಂಗಾ ಹಾಗೂ ಶಿವಗಂಗಾ ಶ್ರೀನಿವಾಸ್ ಮನೆ ಹಾಗೂ ಕ್ರಷರ್, ವಾಟರ್ ಪಾಯಿಂಟ್ ಸೇರಿದಂತೆ ಕಚೇರಿ ಮೇಲೆ ಕೂಡ ದಾಳಿ ನಡೆಸಿ ಮಹತವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮಧ್ಯಾಹ್ನ ದಿಂದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

