ಮಂಗಳೂರು:ಗ್ಲೋಬಲ್ ಲೀಡರ್ಸ್ ಫೌಂಡೇಶನ್ ನವದೆಹಲಿ ಇದರ 15ನೇ ವರ್ಷದ “ಗ್ಲೋಬಲ್ ನ್ಯಾಶನಲ್ ಎಕ್ಸ್‍ಲೆನ್ಸ್ ಎವಾರ್ಡ್-2017” ನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್‍ರವರಿಗೆ ಲಭಿಸಿದೆ. ಫೆಬ್ರವರಿ 23ರಂದು ನವದೆಹಲಿಯ ಡೆಪ್ಯುಟಿ ಸ್ಪೀಕರ್ ಹಾಲ್‍ನಲ್ಲಿ ನಡೆಯುವ ರಾಷ್ಟ್ರೀಯ ಸಾಧಕರ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ರಾಷ್ಟ್ರೀಯ ಅಭಿವೃದ್ದಿಯ ಮೂಲಕ ವೈಯಕ್ತಿಕ ಸಾಧನೆಗಾಗಿ ನೀಡುವ ಈ ಪ್ರಶಸ್ತಿ ನೀಡಲಾಗಿದೆ. ಶ್ರಿ ಯುತರು 1994 ರಿಂದ ಎಸ್‍ಸಿಡಿಸಿಸಿ ಬ್ಯಾಂಕ್‍ನ್ನು ಸತತ 24 ವರ್ಷಗಳ ಸುದೀರ್ಘ ಅವಧಿಯಲ್ಲಿ ಮುನ್ನಡೆಸಿದ್ದು, ಹಲವಾರು ವಿನೂತನ ಯೋಜನೆಗಳ ಮೂಲಕ ಈ ಬ್ಯಾಂಕ್‍ನ್ನು ಸದೃಢವಾಗಿ ಬೆಳೆಸಿ ವಾಣಿಜ್ಯ ಬ್ಯಾಂಕುಗಳಿಗೂ ಪೈಪೋಟಿಯನ್ನು ನೀಡುವಂತಹ ಬ್ಯಾಂಕ್‍ನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕಿಂಗ್ ರಂಗದಲ್ಲಿ ವಿನೂತನ ತಂತ್ರಜ್ಞಾನದ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ಎಸ್‍ಸಿಡಿಸಿಸಿ ಬ್ಯಾಂಕ್‍ನ್ನು ರೂಪುಗೊಳಿಸಿದ ಡಾ. ಎಂ. ನ್. ರಾಜೇಂದ್ರ ಕುಮಾರ್ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಬ್ಯಾಂಕಿಂಗ್ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.
ಇವರ ಅಧ್ಯಕ್ಷತೆಯಲ್ಲಿ ಈ ಬ್ಯಾಂಕಿಗೆ ಸತತ 18 ವರ್ಷಗಳಿಂದ ರಾಜ್ಯದ ಅತ್ಯುತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂದು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 18 ವರ್ಷಗಳಿಂದ ನಬಾರ್ಡ್ ಪ್ರಶಸ್ತಿ ಲಭಿಸಿದೆ.
ಇವರು ಎಸ್‍ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡಾಗ ಕೇವಲ 25 ಶಾಖೆಗಳು ಇದ್ದು ಒಟ್ಟು ಠೇವಣಾತಿ ರು. 64 ಕೋಟಿ, ಹೊರಬಾಕಿ ಸಾಲ ರೂ.46 ಕೋಟಿ, ಲಾಭ ರು. 42ಲಕ್ಷ ಮಾತ್ರ ಇತ್ತು. ಆದರೆ ಈಗ ಬ್ಯಾಂಕು 102 ಶಾಖೆಗಳನ್ನು ಹೊಂದಿದ್ದು ಬ್ಯಾಂಕಿನ ಠೇವಣಾತಿ ರು. 3201.64 ಕೋಟಿ, ಬ್ಯಾಂಕ್ ರು. 2382.05 ಕೋಟಿ ಮುಂಗಡ ನೀಡಿದ್ದು, ಒಟ್ಟು ವ್ಯವಹಾರ ರು. 5883.67ಕೋಟಿ, ಲಾಭ ರು. 24.07ಕೋಟಿ ಆಗಿದೆ.

