ಕರ್ನಾಟಕದಲ್ಲಿ ವಿಕಾಸದ ಪ್ರವಾಹ ನಿಂತುಹೋಗಿದೆ; ಅಮಿತ್ ಶಾ
ಸುಬ್ರಹ್ಮಣ್ಯ :ಕರ್ನಾಟಕದಲ್ಲಿ ಪರಿವರ್ತನೆ ಆರಂಭವಾಗಿದೆ. ಇಲ್ಲಿ ಯಾವುದೋ ಶಾಸಕನ ಬದಲಾವಣೆ ಅಲ್ಲ. ಇದು ವಿಕಾಸವೇ ನಿಂತುಹೋದ ರಾಜ್ಯದ ಪರಿವರ್ತನೆ. ಈ ಕಾಲಕ್ಕೆ ಬಿಜೆಪಿ ಕಾರ್ಯಕರ್ತರು ಸಜ್ಜಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.

ಕುಕ್ಕೆಸುಬ್ರಹ್ಮಣ್ಯದ ಬಳಿಕ ಕುಲ್ಕುಂದಲ್ಲಿ ಮಂಗಳವಾರ ನಡೆದ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ಸ್ಥಿತಿ ಬದಲಾಗಬೇಕಿದೆ. ಅಭಿವೃದ್ಧಿಯ ಪ್ರವಾಹವೇ ನಿಂತುಹೋದ ರಾಜ್ಯದಲ್ಲಿ ಭ್ರಷ್ಟಾಚಾರವೇ ತುಂಬಿಹೋಗಿದೆ. ಹೀಗಾಗಿ ಇಲ್ಲಿ ಯಾವುದೋ ಶಾಸಕನನ್ನೋ, ಸಂಸದನನ್ನೋ ಬದಲಾವಣೆ ಮಾಡುವ ಕಾಲ ಅಲ್ಲ. ಬದಲಾಗಿ ವಿಕಾಸದ ಕಡೆಗೆ ಕೊಂಡೊಯ್ಯುವ, ಭ್ರಷ್ಟಾಚಾರ ನಿಲ್ಲಿಸುವ ಬದಲಾವಣೆ ಇದಾಗಬೇಕಿದೆ ಎಂದರು.

ರಾಜ್ಯದ ಮುಖ್ಯಮಂತ್ರಿ ಮೇಲೆ ದುಬಾರಿ ವಾಚ್‍ನ ಆರೋಪ ಇದ್ದರೆ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪ ಇದೆ. ಇದರ ಪಾಪ ಇಂದಿಗೂ ನಿವಾರಣೆ ಆಗಿಲ್ಲ. ರಾಜ್ಯದಲ್ಲಿ ಕೆಟ್ಟ ರಾಜನೀತಿ, ತುಷ್ಟೀಕರಣ, ಓಲೈಕೆ, ದಬ್ಬಾಳಿಕೆ, ಓಟ್‍ಬ್ಯಾಂಕ್ ರಾಜಕಾರಣ ಇದೆ. ಇದೆಲ್ಲಾ ದೂರವಾಗಬೇಕಿದೆ. ಇದಕ್ಕೆಲ್ಲಾ ಉದಾಹರಣೆ ಇತ್ತೀಚೆಗೆ ಶಾಸಕರ ಪುತ್ರನೊಬ್ಬನ ದಬ್ಬಾಳಿಕೆ ಹಾಗೂ ಆ ಬಳಿಕ ಸರಕಾರ ನಡೆದುಕೊಂಡ ರೀತಿಯೇ ಓಲೈಕೆ ರಾಜಕಾರಣಕ್ಕೆ ಮಾದರಿಯಾಗಿದೆ ಎಂದರು.

ಜನತೆ ಸಹನೆ ಕಳೆದುಕೊಂಡಿದ್ದಾರೆ ವಿಕಾಸವೇ ನಿಂತು ಹೋದ ಈ ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ, ಈ ಸಂದರ್ಭ ಬೂತ್ ಮಟ್ಟದಲ್ಲಿ ನವರತ್ನಗಳು ಕೆಲಸ ಮಾಡಬೇಕಿದೆ. ಕ್ಷೇತ್ರ ಗೆಲ್ಲುವ ಬದಲಾಗಿ ಪ್ರತೀ ಬೂತ್ ಗೆಲ್ಲಬೇಕಾಗಿದೆ ಇದಕ್ಕೆ ಪ್ರಯತ್ನವಾಗಬೇಕು. ಬೂತ್ ಗೆದ್ದರೆ ಕ್ಷೇತ್ರ ಗೆಲ್ಲವು ಸಾಧ್ಯ ಎಂದರು.
—
ಸುಳ್ಯದಲ್ಲಿ ಬಿಜೆಪಿಗೆ ಗೆಲುವು;
ಸುಳ್ಯವು ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು. 1980 ರ ಸುಮಾರಿಗೆ ಜಗನ್ನಾಥ ರಾವ್ ಜೋಶಿ ಅವರು ನೆನಪಿಸಿದ್ದರು. ಸುಳ್ಯದಲ್ಲಿ ನಮ್ಮ ಗೆಲುವು ನಿಶ್ಚಿತ. ಈಗಲೂ ಅದು ಸತ್ಯವಾಗಿದೆ. ಬೇರೆಲ್ಲಾ ಕಡೆ ತ್ರಿಕೋನ ಸ್ಫರ್ಧೆಯೂ ಇದ್ದರೆ ಸುಳ್ಯದಲ್ಲಿ ಮಾತ್ರಾ ಪರಿಸ್ಥಿತಿ ಹಾಗಿಲ್ಲ. ಸಂಘಟನೆ ಇಲ್ಲಿ ಉತ್ತಮವಾಗಿದೆ ಇದು ಇಡೀ ರಾಜ್ಯಕ್ಕೆ ಪ್ರಸಾರವಾಗಬೇಕು. ರಾಜ್ಯದಲ್ಲಿ ಕಮಲ ಅರಳುವ ಮೂಲಕ ದಕ್ಷಿಣ ಭಾರತದಲ್ಲಿ ಕಮಲದ ಹೆಬ್ಬಾಗಿಲು ತೆರೆಯಬೇಕು ಎಂದು ಅಮಿತ್ ಶಾ ಹೇಳಿದರು.
—–

20MNG66
19 ರಾಜ್ಯದಲ್ಲಿ ಬಿಜೆಪಿ ಅಧಿಕಾರ
ಅನೇಕ ಕಡೆಗಳಲ್ಲಿ ರ್ಯಾಲಿ ನಡೆಯುತ್ತದೆ. ಆದರೆ ಈಗ ಬಿಜೆಪಿ ಕಾರ್ಯಕರ್ತರಲ್ಲಿ ನವಶಕ್ತಿ ಇದೆ. ಇದು ಕಾರ್ಯಕರ್ತರಿಗೆ ಮಾತ್ರವೇ ತಿಳಿದಿದೆ. ಈ ಶಕ್ತಿ ಪ್ರತೀ ಬೂತ್ ಗಟ್ಟಿ ಮಾಡಬೇಕು. 2018 ರ ಕರ್ನಾಟಕ ರಾಜ್ಯದ ಚುನಾವಣೆ ರಾಷ್ಟ್ರಕ್ಕೆ ಸಂದೇಶ ನೀಡುವ ಚುನಾವಣೆಯಾಗಿದೆ. ವಿಕಾಸ ಹಾಗೂ ಭ್ರಷ್ಟಾಚಾರದ ನಡುವಿನ ಚುನಾವಣೆಯಾಗಲಿದೆ ಎಂದು ಅಮಿತ್ ಶಾ ಹೇಳಿದರು. ಕೇವಲ 10 ಜನರಿಂದ ಆರಂಭವಾದ ಬಿಜೆಪಿ ಪಕ್ಷ ಇಂದು 300 ಕ್ಕೂ ಸಂಸದರೂ ಸೇರಿದಂತೆ 19 ರಾಜ್ಯಗಳಲ್ಲಿ ಬಿಜೆಪಿ ಇದೆ. ಈಗ ರಾಜ್ಯದಲ್ಲೂ ಪರಿವರ್ತನೆ ಆರಂಭವಾಗುತ್ತಿದೆ ಎಂದರು.

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಅಮಿತ್ ಶಾ ಅವರ ಪ್ರವಾಸ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‍ಗೆ ನಡುಕ ಆರಂಭವಾಗಿದೆ. ಭ್ರಷ್ಟಾಚಾರದ ಕೂಪವಾದ ಕಾಂಗ್ರೆಸ್ ಸೋಲು ಕಾಣುತ್ತಿದೆ. ಈ ಸರಕಾರ 10 ಪರ್ಸೆಂಟೇಜ್ ಅಲ್ಲ 30 ಪರ್ಸೆಂಟೇಜ್ ಸರಕಾರ. ಎತ್ತಿನಹೊಳೆಯಂತಹ ಯೋಜನೆಯ ಮೂಲಕ ಕೋಟಿ ಕೋಟಿ ಹೊಡೆಯುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ ಇಡೀ ಸರಕಾರವೇ ನಿದ್ದೆ ಮಾಡುತ್ತಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸುಳ್ಯ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯಕ್ಕೆ ಮಾದರಿಯಾದ ಕ್ಷೇತ್ರ. ಇದು ಬಿಜೆಪಿಯ ಹೆಬ್ಬಾಗಿಲು. ಕಾರ್ಯಕರ್ತರಿಂದಲೇ ಈ ಕ್ಷೇತ್ರ ಬೆಳೆದಿದೆ. ಉಳಿದಿದೆ. ಹೀಗಾಗಿ ಸುಳ್ಯದಿಂದ ವಿಜಯ ಯಾತ್ರೆ ಈ ಬಾರಿ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಶ್ರದ್ಧಾಕೇಂದ್ರಗಳ ಪ್ರದೇಶ ಸುಳ್ಯವು ಬಿಜೆಪಿ ಶಕ್ತಿಕೇಂದ್ರ ಹೀಗಾಗಿ ಇಲ್ಲಿಂದಲೇ ಯಾತ್ರೆ ಆರಂಭವಾಗಿದೆ ಎಂದರು.

ವೇದಿಕೆಯಲ್ಲಿ ಶಾಸಕ ಅಂಗಾರ , ಬಿಜೆಪಿ ಮುಖಂಡ ಅರುಣ್ ಕುಮಾರ್, ಬಿ. ಎಲ್. ಸಂತೋಷ್, ಮೋನಪ್ಪ ಭಂಡಾರಿ, ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸುಳ್ಯ ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಎನ್. ಮನ್ಮಥ, ಹರೀಶ್ ಕಂಜಿಪಿಲಿ ಇದ್ದರು.

ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿದರು. ವೆಂಕಟ್ ದಂಬೆಕೋಡಿ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
———
ಬಾಕ್ಸ್;
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಅಮಿತ್ ಶಾ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಮಿತ್ ಶಾ ಮಂಗಳವಾರ ಭೇಟಿ ನೀಡಿದರು. ಸೋಮವಾರ ತಡರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಅಮಿತ್ ಶಾ ಅವರು ದೇವಸ್ಥಾನದ ವಸತಿಗೃಹದಲ್ಲಿ ತಂಗಿದರು.

ಸೋಮವಾರ ಬೆಳಗ್ಗೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು. ಸ್ವಾಮೀಜಿ ಜೊತೆ ಮಾತುಕತೆ ಬಳಿಕ ಬಿಜೆಪಿ ಸಮಾವೇಶಕ್ಕೆ ಅಮಿತ್ ಶಾ

By Suddi9

Leave a Reply

Your email address will not be published. Required fields are marked *