ಬೆಂಗಳೂರು: ವಿಧಾನ ಸಭೆಯಲ್ಲಿ ಕಾಂಗ್ರಸ್ ಸರ್ಕಾರದ ಕೊನೆಯ ಅಧಿವೇಶನದ ಕೊನೆಯ ದಿನದ ಕಲಾಪ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಾಪದಲ್ಲಿ ಭಾಷಣ ಮಾಡಿ ತಮ್ಮ ಸರ್ಕಾರದ ಬಗ್ಗೆ ಗುಣಗಾಣ ಮಾಡಿದರು. ಅಲ್ಲದೇ ಮತ್ತೆ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದು ಬಿಜೆಪಿಯವರ ಸಲಾಲೆಸೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಭಾಷಣದ ವೇಳೆ, ದೇವರಾಜು ಅರಸ್ ಬಳಿಕ ಐದು ವರ್ಷ ಸಂಪೂರ್ಣ ಆಡಳಿತ ನಡೆಸಿದ ಸಿಎಂ ನಾನೇ ಮುಖ್ಯಮಂತ್ರಿಯಾಗಿ 6 ಬಜೆಟ್ ಹಾಗೂ ಹಣಕಾಸು ಮಂತ್ರಿಯಾಗಿ 13 ಬಜೆಟ್ ಮಂಡಿಸಿದ್ದೇನೆ. ರಾಮಕೃಷ್ಣ ಹೆಗಡೆಯವರ ನಂತರ ನಾನೇ ಹೆಚ್ಚು ಬಜೆಟ್ ಮಂಡಿಸಿದ್ದು ಎಂದರು.
ಸರ್ಕಾರದ ಕೊನೆ ಅಧಿವೇಶನ. ವಿಧಾನಸಭೆ ರಚನೆ ನಂತರ ಮತ್ತೆ ಸದಸ್ಯರು ಮುಖಾಮುಖಿ ಆಗೋದು. ಐದು ವರ್ಷದ ನಮ್ಮ ಸರ್ಕಾರದ ಜೊತೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಬಾರಿ ಬಿಜೆಪಿ ಗೋಡೆ ಬರಹ ಅಷ್ಟೇ. ಎಷ್ಟು ಬರೆಸುತ್ತಾರೋ ಬರೆಸಲಿ. ಮತ್ತೆ ನಾವೇ ಅಧಿಕಾರಕ್ಕೆ ಬರುವುದು ಖಚಿತ. ಏನ್ರೀ ಜಗದೀಶ್ ಶೆಟ್ಟರ್, ಸರಿ ತಾನೆ? ಎಂದ ಅವರು, ನಾವು ಇಲ್ಲೇ ಕೂರ್ತಿವಿ. ನೀವು ಅಲ್ಲೇ ಕೂರಬೇಕು ಇದು ಸತ್ಯ ಎಂದು ಬಿಜೆಪಿಯವರ ಕಾಳೆದರು.
ಬಜೆಟ್ ಮೇಲಿನ ಭಾಷಣಕ್ಕೆ ನಿಂತ ಸಿಎಂ ಸಿದ್ದರಾಮಯ್ಯ, ಪದೇ ಪದೇ ನಮ್ಮದೇ ಸರ್ಕಾರ ಮುಂದೆಯೂ ಅಧಿಕಾರಕ್ಕೆ ಬರೋದು ಎಂದರು. ಮೊನ್ನೆ ಮೈಸೂರಿಗೆ ಪ್ರಧಾನಿ ಮೋದಿ ಬಂದಾಗಲೂ ನಾನು ಇದೇ ಮಾತು ಹೇಳಿದ್ದೇ. ಅವರ ಜೊತೆ ಕೇಂದ್ರ ಸಚಿವ ಅನಂತ್ ಕುಮಾರ್ ಕೂಡ ಇದ್ರು. ನನಗೆ ಗೊತ್ತು ನಾವೇ ಅಧಿಕಾರಕ್ಕೆ ಬರ್ತೇವೆ ಎಂದು ಸಿಎಂ ಹೇಳ್ತಿದ್ದಂತೇ, ಬಿಜೆಪಿ ಸದಸ್ಯರು ಗರಂ ಆದ್ರು. ಕೆಲಕಾಲ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೀತು. ಸ್ಪೀಕರ್ ಎಂದು ನಿಂತು ಸದವನ್ನು ಹತೋಟಿಗೆ ತಂದರು.

