ಸುದ್ದಿ9ಮೂಡುಪೆರಾರ ಕಾರ್ಯಕ್ಷೇತ್ರದ ಮುಂಡೇವು ಎಂಬಲ್ಲಿ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ ಮಾಡಿ ಸ್ಚಚ್ಚತಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಯೋಜನೆಯ ಕೈಕಂಬ ವಲಯದ ಮೇಲ್ವೀಚಾರಕ ಮುಖ್ಯ ಅಥಿತಿಯಾಗಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಸ್ಥಳೀಯ ಸೇವಾ ಪ್ರತಿನಿಧಿ ಜನಾರ್ಧನ ಎಸ್. ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮೀಶ ಅಧ್ಯಕ್ಷತೆ ವಹಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ರಾಜು, ದಿನಕರ್ ಮುಚ್ಚೂರು ಸೇವಾ ಪ್ರತಿನಿಧಿ ಶೇಖರ್ ಹಾಗೂ ಯೋಜನೆಯ ಕೃಷಿ ಅಧಿಕಾರಿ ಜನಾರ್ಧನ ಉಪಸ್ಥಿತರಿದ್ದರು. ಕು.ವೀರಾ ಧನ್ಯವಾದವಿತ್ತರು.

