ಮಂಗಳೂರುಃ ಫೆ.15ರಂದು ಮಂಗಳೂರು ಸಂಚಾರಿ ದಳದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಉಡುಪಿ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನ ಟೋಲ್ ಗೇಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಕುಂದಾಪುರ ಕಡೆಯಿಂದ ಬರುತ್ತಿ ದ್ದ ಮೋಟಾರ್ ಸೈಕಲ್ ನಲ್ಲಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಜಿಂಕೆ ಚರ್ಮ ಅಕ್ರಮವಾಗಿ ಬೇಟೆಯಾಡಿ ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಆರೋಪಿಗಳಾದ ಸಾಗರದ ಮೋಹನ ಕುಮಾರ (22), ಮತ್ತು ಗಂಗೊಳ್ಳಿಯ ವಿಕ್ರಮ (24) ರವರನ್ನು ದಸ್ತಗಿರಿ ಮಾಡಿ ಮೋಟಾರ್ಸೈಕಲ್ ಜಿಂಕೆಚರ್ಮ ಸ್ವಾಧೀನಪಡಿಸಿಕೊಂಡು ಮುಂದಿನ ತನಿಖೆಗೆ ವರದಿಯೊಂದಿಗೆ ಉಡುಪಿ ವಲಯಾರಣ್ಯಾಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಮಡಿಕೇರಿ ಸಿ. ಐ.ಡಿ. ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಎಚ್.ಆರ್ ಧರಣೇಂದ್ರ ಅವರ ಮಾರ್ಗ ದರ್ಶನದಲ್ಲಿ ಮಂಗಳೂರು ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸುಧಾಕರ್ ಜಿ ತೋನ್ಸೆ ಹಾಗೂ ಸಿಬ್ಬಂದಿಗಳಾದ ಪ್ರವೀಣ ಜೆ, ಉದಯ ನಾಯ್ಕ ಎನ್, ಮಹೇಶ ಟಿ, ದೇವರಾಜ್ ಹಾಗೂ ಸುಂದರ ಶೆಟ್ಟಿ ರವರು ಪಾಲ್ಗೊಂಡಿರುತ್ತಾರೆ.