ಬಂಟ್ವಾಳ: ಬಿಸಿರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ ವಾರ್ಷಿಕ ಜಾತ್ರೆ ಇಂದು ಸಮಾಪನಗೊಂಡಿತು. ಫೆ.12 ರಂದು ಆರಂಭಗೊಂಡ ದೇವಿಯ ಜಾತ್ರೆ ಫೆ.14 ರ ಬುಧವಾರ ದವರೆಗೆ ನಡೆಯಿತು.
ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಗಳ ನೇತ್ರ ತ್ವದಲ್ಲಿ ವಿವಿಧ ಧಾರ್ಮಿಕ ವಿಧಿಗಳು ನಡೆಯಿತು.ಫೆ 12 ರಿಂದ ವಿವಿಧ ದಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದು ಫೆ 14 ರಂದು ಬುಧವಾರ ಬೆಳಿಗ್ಗೆ ಗಣಹೋಮ, ದರ್ಶನ ಬಲಿ ಉತ್ಸವ , ಬಟ್ಟಲು ಕಾಣಿಕೆ , ರಾಜಾಂಗಣ ಪ್ರಸಾದ, ನವಕಲಶಾಭಿಷೇಕ, ಮಹಾಪೂಜೆ ನಡೆದು ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಿತು.

