ಬಂಟ್ವಾಳ:ತಾಲ್ಲೂಕಿನ ಸಜಿಪನಡು ಎಂಬಲ್ಲಿ ಇಲ್ಲಿನ ನಿವಾಸಿ ದಿವಂಗತ ಶ್ರೀಪತಿ ಭಟ್ ಇವರ ಪತ್ನಿ ಇಂದಿರಾ ಭಟ್ (67) ಎಂಬವರಿಗೆ ಶನಿವಾರ ತಡರಾತ್ರಿ ಸ್ಥಳೀಯ ಮೂವರು ಯುವಕರು ಅವಾಚ್ಯವಾಗಿ ನಿಂದಿಸಿ ಮೈಮೇಲೆ ಕೈ ಹಾಕಿದ್ದಾರೆ ಎಂದು ಆರೋಪಿಸಿ ಗ್ರಾಮಾಂತರ ಠಾಣೆಗೆ ಸೋಮವಾರ ದೂರು ಸಲ್ಲಿಸಿದ ಘಟನೆ ನಡೆದಿದೆ. ಆರೋಪಿಗಳನ್ನು ಸ್ಥಳೀಯ ನಿವಾಸಿ ಝಾಕಿರ್ ನೇತೃತ್ವದ ತಂಡ ಎಂದು ಗುರುತಿಸಲಾಗಿದೆ ಎಂದು ಪೊಲೀಸು ತಿಳಿಸಿದ್ದಾರೆ.
