ಬಂಟ್ವಾಳ:ತಾಲ್ಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ತಿರುವು ರಸ್ತೆಯಲ್ಲಿ ಬೆಳ್ತಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರು ಪತ್ತೆಯಾದ ಘಟನೆ ಸೋಮವಾರ ನಡೆದಿದೆ.

ಸೋಮವಾರ ಬೆಳಿಗ್ಗೆ ಸುಮಾರು 6ಗಂಟೆಗೆ ಅಂಚಿಕಟ್ಟೆ ತಿರುವು ರಸ್ತೆಯಲ್ಲಿ ಕಂಟೈನರ್ ಲಾರಿಯೊಂದು ಉರುಳಿ ಬಿದ್ದಿರುವುದು ಕಂಡು ಬಂದಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಸ್ಥಳೀಯರು ಬಂದು ನೋಡಿದಾಗ ಕಂಟೈನರ್ ಒಳಗೆ 9 ಎತ್ತು, 5 ಎಮ್ಮೆ ಒಟ್ಟು 14 ಜಾನುವಾರು ಕಂಡು ಬಂದಿದೆ. ಇದರಲ್ಲಿ ಒಂದು ಎತ್ತು ಉಸಿರುಗಟ್ಟಿ ಸಾವನ್ನಪ್ಪಿದೆ. ಕಂಟೈನರ್ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *