ಹಾಸನ: ಬಾಹುಬಲಿಯ ತತ್ವ ಆದರ್ಶಗಳು ನಮಗೆ ಮಾದರಿಯಾಗಿದೆ ಎಂದು ರಾಷ್ಷ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ಬುಧವಾಋ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ೮೮ ನೇ ಮಸ್ತಕಾಭಿಷೇಕ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಿಜೀ೯ವ ಕಲ್ಲಿನಲ್ಲಿ ಬಾಹುಬಲಿಯ ತತ್ವಗಳು ಜೀ೯ವತುಂಬಿವೆ. ಇಡೀ ವಿಶ್ವಕ್ಕೆ ಜೈನತತ್ವಗಳು ಪೂರಕ ಇವುಗಳನ್ನು ನಮ್ಮ ಜೀವನದಲ್ಲಿ ಅನುಸರಿಸಿದರೆ ವಿಶ್ವದ ಕಲ್ಯಾಣವಾಗಲಿದೆ ಎಂದು ನುಡಿದರು.
ಪರಂಪರೆಯ ಭಾಗವಾಗಿರುವುದು ನನಗೆ ಸಂತೋಷವಾಗಿದೆ. ರಾಷ್ಷ್ರಪತಿ ಆದ ಮೇಲೆ ರಾಜ್ಯಕ್ಕೆ ಇದು ನನ್ನ ಪ್ರಥಮ ಭೇಟಿಯಾಗಿದ್ದೆ ಎಂದು ಅವರು, ಕನ್ನಡದಲ್ಲಿ ಎಲ್ಲರಿಗೊ ನಮಸ್ಕಾರ ಹೇಳಿ ರಾಷ್ಟ್ರಪತಿಗಳು ಭಾಷಣ ಅರಂಭಿಸಿದರು
ಸಿಎಂ ಸಿದ್ದರಾಮಯ್ಯ ಮಾತನಾಡಿ, ಧನ್ಯತಾ ಭಾವದಿಂದ ಈ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದೇನೆ ಮಹೋತ್ಸವದಲ್ಲಿ ಭಾಗಿ ಯಾಗಿರುವ ಎಲ್ಲರಿಗೂ ರಾಜ್ಯ ಸರಕಾರದ ಪರವಾಗಿ ಸ್ವಾಗತ ಎಂದು ಕೋರಿದರು.
ಮಸ್ತಕಾಭಿಷೇಕ ಆಚರಣೆಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ, ಮಸ್ತಕಾಭಿಷೇಕ ಅಚ್ಚುಕಟ್ಟಾಗಿ ದೇಶದ ಗಮನ ಸೆಳೆಯುವ ನಿಟ್ಟಿನಲ್ಲಿ ಆಚರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೆ ಪೂರ್ವ ಸಿದ್ಧತಾ ಕಾರ್ಯ ಬಹುತೇಕ ಪೂರ್ಣವಾಗಿದೆ ಇದಕ್ಕೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಇದು ಬಾಹುಬಲಿಗೆ ನಾವು ಸಲ್ಲಿಸುವ ಗೌರವ ಜಾತಿ ಜಾತಿಗಳ ನಡುವೆ ದ್ವೇಷ ಕಾಣುತ್ತಿದ್ದೇವೆ ಇಂಥ ಪರಿಸ್ಥಿತಿ ನಿವಾರಣೆ ಯಾಗಬೇಕು ನಾವೆಲ್ಲರೂ ಮನುಕುಲಕ್ಕೆ ಸೇರಿದವರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸ್ವಾರ್ಥ ದುರಾಸೆ ಬಿಡುವವರೆಗೂ ನೆಮ್ಮದಿ ಶಾಂತಿ ಸಿಗಲ್ಲ ಸಮಾಜ ಅಭಿವೃದ್ಧಿಯೂ ಸಾಧ್ಯವಾಗಲ್ಲ. ಮನುಷ್ಯರ ಮಾತು ನಡವಳಿಕೆ ಪೂರಕ ವಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜಪಾಲರಾದ ವಜು ಬಾಯಿವಾಲಾ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು. ಶಾಸಕರಾದ ಸಿ.ಎನ್.ಬಾಲಕೃಷ್ಣ, ಗೋಪಾಲ್ ಸ್ವಾಮಿ ಇತರೆ ಗಣ್ಯರು ಹಾಜರಿದ್ದರು.


