6CKD3-300x200

ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡಬೇಕು. ಮಾಡದೇ ಹೋದರೆ ನಾನು ಸಿಎಂ ಸಿದ್ದರಾಮಯ್ಯ ಮನೆ ಎದುರು ಜಿಲ್ಲೆಗಾಗಿ ವಿಷ ಕುಡಿಯಲು ಸಿದ್ಧ ಎಂದು ಸಂಸದ ಪ್ರಕಾಶ ಹುಕ್ಕೇರಿ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಮಿನಿವಿಧಾನ ಸೌದ ಎದುರು ಕಳೆದ ಎರಡು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಮಂಗಳವಾರ ಆಗಮಿಸಿ ಧರಣಿ ನಿರತ ಜಿಲ್ಲಾ ಹೋರಾಟ ಸಮಿತಿ ಸದಸ್ಯರ ಮನವೊಲಿಸಲು ಪ್ರಯತ್ನಿಸಿದ ಅವರು, ನನಗೂ ಜಿಲ್ಲೆಯಾಗಬೇಕು ಎಂಬ ಆಶಯವಿದ್ದು, ಬೇಕಾದರೇ ನನ್ನ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಆದರೆ ರಾಜಕೀಯವಾಗಿ ನನ್ನೊಬ್ಬನನ್ನೇ ಗುರಿಯಾಗಿಸಬೇಡಿ ಎಂದು ಮನವಿ ಮಾಡಿದರು.

ಎಲ್ಲರೂ ಸೇರಿ ಬೆಂಗಳೂರಿಗೆ ಹೋಗಿ ಸಿಎಂ ಮೇಲೆ ಒತ್ತಡ ಹೇರೋಣ ಈಗ ಧರಣಿ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು. ಆದರೆ ಅವರ ಮನವಿಗೆ ಸ್ಪಂಧಿಸದ ಹೋರಾಟಗಾರರು ಇಂದೆ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಿಸಿ ನಾವು ಈಗಲೇ ಧರಣಿ ಕೈ ಬಿಡುತ್ತೇವೆ. ಆದರೆ ಚಿಕ್ಕೋಡಿ ಜಿಲ್ಲಾ ಘೋಷಣೆಯಾಗುವವರೆಗೂ ನಾವು ಧರಣಿಯಿಂದ ಹಿಂದೆ ಸರಿಯುವುದಿಲ್ಲ. ಮುಂದಿನ ದಿನಮಾನದಲ್ಲಿ ಹೋರಾಟವನ್ನು ಉಗ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

2ನೇ ದಿನಕ್ಕೆ ಕಾಲಿಟ್ಟ ಧರಣಿ ಚಿಕ್ಕೋಡಿಯಲ್ಲಿ ಚಿಕ್ಕೋಡಿ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಸೋಮವಾರ ಆರಂಭಿಸಿದ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ನೇತೃತ್ವದಲ್ಲಿ ಕರವೇ, ರೈತ ಸಂಘ, ದಲಿತ ಸಂಘಟನೆಗಳು,ಎಬಿವಿಪಿ, ಜಯ ಕರ್ನಾಟಕ ಸಂಘಟನೆ, ಅಲ್ಲಮಪ್ರಭು ಅನ್ನದಾನ ಸಮಿತಿ, ಕರ್ನಾಟಕ ನವ ನಿರ್ಮಾಣ ಪಡೆ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಮತ್ತು ಪದಾಧಿಕಾರಿಗಳು ಧರಣಿಯಲ್ಲಿ ನಿರತರಾಗಿದ್ದರು.

By Suddi9

Leave a Reply

Your email address will not be published. Required fields are marked *