IMG-20180205-WA0207-701x380

ಹಾವೇರಿ: ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಮ್ಲ ಜನಕದ ಕೊರತೆಯಿಂದ ಮೃತಪಟ್ಟ ಯೋಧ ಚಂದ್ರಶೇಖರ ಡವಗಿ ಪಾರ್ಥೀವಶರೀರ ಸೋಮವಾರ ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಿತು.

ಪಟ್ಟಣಕ್ಕೆ ಯೋಧನ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸ್ನೇಹಿತರು,ಬಂಧುಗಳು, ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿ ಗೌರವ ಸಲ್ಲಿಸಿದರು.

ಬಳಿಕ ಪಟ್ಟದ ಸಂತೆ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದುಕೊಂಡರು.

ಅಂತಿಮ ದರ್ಶನದ ಬಳಿಕ, ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತೆ. ಬಳಿಕ, ಗ್ರಾಮದ ಶಿಬಾರದ ಬಳ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಹತ್ತಿರ ಸಂಬಂಧಿ ತಿಳಿಸಿದರು.

ಮುಗಿಲು ಮುಟ್ಟಿದ ಮಡದಿ-ಮಕ್ಕಳ ಆಕ್ರಂದನ: ಹುತಾತ್ಮ ಯೋದ ಚಂದ್ರಶೇಖರ ಅವರ ಪಾರ್ಥಿವ ಶರೀರವನ್ನು ಪಟ್ಟಣಕ್ಕೆ ತರುತ್ತಿದ್ದಂತ, ಅತ್ತ ಮಡದಿ, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತು.‌ ಇದನ್ನು ನೋಡುತ್ತಿದ್ದ ಸಂಬಂಧಿಗಳು ಹಾಗೂ ಊರಿನ ಗ್ರಾಮಸ್ಥರು ದುಖ: ತಡೆದುಕೊಳ್ಳಲಾಗದೇ ಕಣ್ಣೀರಿನ ಕೋಡಿ ಹರಿಸಿದರು.

ಮತ್ತೋಂದೆಡೆ, ಮಡದಿ ಗಂಡನೊಂದಿಗೆ ಕಳೆದ ಆ ಸಂಸತದ ದಿನಗಳನ್ನು ನೆನೆಸಿಕೊಂಡು ರೋಧಿಸುವದು. ಕಳೆದ ಡಿಸೆಂಬರ್ ತಿಂಗಳಲ್ಲಿ ರಜೆಯ ಮೇಲೆ ಗ್ರಾಮಕ್ಕೆ ಬಂದಾಗ ಆಡಿದ ಮಾತುಗಳನ್ನು ಹಾಗೂ ಕೊನೆಯ ಬಾರಿ ಮೊಬೈಲ್ ನಲ್ಲಿ ಕೇಳಿದ ಧ್ವನಿಯನ್ನು ನೆನೆಸಿ ರೋಧಿಸುವ ದೃಶ ಮನಕಲುಕುವಂತಿತ್ತು.

By Suddi9

Leave a Reply

Your email address will not be published. Required fields are marked *