ಅಡ್ಡೂರು: ಕಳೆದ ಹಲವಾರು ವರ್ಷಗಳಿಂದ ಕ್ರೀಡಾ ರಂಗದಲ್ಲಿ ತನ್ನನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಫೈವ್ ಸ್ಟಾರ್ ಯಂಗ್ ಬಾಯ್ಸ್, ಅಡ್ಡೂರು ಗ್ರಾಮವನ್ನು ಅಭಿವೃದ್ಧಿ ಶೀಲ ಗ್ರಾಮವಾಗಿಸುವುದರೊಂದಿಗೆ ಇದೀಗ ಸಮಾಜಿಕ ಸೇವೆಯತ್ತ ಹೆಜ್ಜೆಯಿಡುತ್ತಿದ್ದು, ತನ್ನ ಸಂಸ್ಥೆಯ ನೂತನ ಕಚೇರಿಯನ್ನು ಸಮಾಜ ಮುಖಿಯಾದ ಹತ್ತು ಹಲವಾರು ವಿಶಿಷ್ಟ ಕಾರ್ಯ ಕ್ರಮವನ್ನು ಆಯೋಜಿಸುವುದರ ಮೂಲಕ ಉದ್ಘಾಟಿಸುತ್ತಿರುವುದು ಅಡ್ಡೂರು ಗ್ರಾಮಕ್ಕೆ ತುಂಬಾ ಸಂತೋಷದ ವಿಷಯ.
ಯುವ ಶಕ್ತಿ ದೇಶದ ಮಹಾಶಕ್ತಿಯಾಗಿದೆ ಎಂಬ ವಾಕ್ಯದಂತೆ ಒಂದು ಗ್ರಾಮವು ಅಭಿವೃದ್ಧಿಗೊಳ್ಳಬೇಕಾದರೆ ಯುವಕರ ಪಾಲು ಅತೀ ಮುಖ್ಯವಾಗಿದ್ದು, ಗ್ರಾಮವನ್ನು ಅಭಿವೃದ್ಧಿ ಪಡಿಸುವ ಕನಸನ್ನು ಹೊತ್ತು ಯುವಕರು ಹೊರಟಾಗ ಅವರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ.
ಯುವಕರ ಬಲಿಷ್ಠ ಪಡೆಯನ್ನು ಹೊಂದಿರುವ ಫೈವ್ ಸ್ಟಾರ್ ಯಂಗ್ ಬಾಯ್ಸ್ ಸಂಸ್ಥೆಯು ಹಮ್ಮಿಕೊಂಡಿರುವ ಈ ಸಮಾಜಿಕ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಾ ಅಡ್ಡೂರು ಗ್ರಾಮದಲ್ಲಿ ಇನ್ನಷ್ಟು ಸಮಾಜ ಮುಖಿಯಾದ ಸೇವೆಯನ್ನು ಈ ಗ್ರಾಮಕ್ಕೆ ನೀಡುವಂತಾಗಲಿ ಎಂದು ಗ್ರಾಮದ ನಾಗರಿಕರು ಹಾರೈಸುತ್ತಿದ್ದು, ಸಂಸ್ಥೆಗೆ ಎಲ್ಲಾ ರೀತಿಯ ಬೆಂಬಲವನ್ನು ಸೂಚಿಸುತ್ತ ಫೈವ್ ಸ್ಟಾರ್ ಯಂಗ್ ಬಾಯ್ಸ್ ಇದರ ಸರ್ವ ಸದಸ್ಯರಿಗೂ ತುಂಬು ಹೃದಯದ ಅಭಿನಂದನೆಗಳು.
ಬರಹ: ಅಸ್ತಾರ್ ಅಡ್ಡೂರು
