ಸುದ್ದಿ9:ಸುರತ್ಕಲ್: ಶುಕ್ರವಾರ ಮೃತಪಟ್ಟ ಅಗ್ನಿ ಶಾಮಕ ಇಲಾಖೆ ಸಿಬಂದಿ ಪಿ ಸುಂದರ್(53) ಅವರ ಸಾವಿಗೆ ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗದಿರುವುದೇ ಕಾರಣ ಎಂಬ ದೂರಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಮೊದೀನ್ಬಾವಾ ಜಿಲ್ಲಾ ಅರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೃಷ್ಣಾಪುರ 5ನೇ ವಿಭಾಗದಲ್ಲಿರುವ ಪಿ ಸುಂದರ್ ಅವರ ಸ್ವಗೃಹದಲ್ಲಿ ಅವರ ಅಂತಿಮ ದರ್ಶನ ಪಡೆದ ಬಳಿಕ ಶನಿವಾರ ಅವರು ಸುದ್ದಿಗಾರೊಂದಿಗೆ ಮಾತನಾಡಿದರು.
ಹೃದಯಾಘಾತ ಉಂಟಾಗಿದ್ದರೂ ಗ್ಯಾಸ್ ಟ್ರಬಲ್ಗೆ ಮದ್ದು ನೀಡಿದ್ದ ವೈದ್ಯರು…!
ಉತ್ತಮ ಮೆಕ್ಯಾನಿಕ್ ಅಗಿದ್ದ ಪಿ. ಸುಂದರ್ ಅವರ ಸಾವಿಗೆ ಅವರಿಗೆ ಸರಿಯಾಗಿ ಚಿಕಿತ್ಸೆ ದೊರೆಯದಿರುವುದು ಕಾರಣ. ಅವರಿಗೆ ಶುಕ್ರವಾರ ಬೆಳಗ್ಗೆ ಹೃದಯಾಘಾತ ಉಂಟಾಗಿದ್ದರೂ ಸುರತ್ಕಲ್ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಗ್ಯಾಸ್ ಟ್ರಬಲ್ ಎಂದು ೆ ಚಿಕಿತ್ಸೆ ನೀಡಿದ್ದರು.ಅದರೆ ಅದನ್ನೇ ನಂಬಿದ್ದ ಅವರು ಬೈಕ್ನಲ್ಲಿ ಮನೆಗೆ ಹೋಗಿದ್ದು ಬಳಿಕ ಹೃದಯಾಘಾತದಿಂದ ಎದೆನೋವು ಮರು
ಕಳಿಸಿ ಅಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರು ಎಂದು ಅಧಿಕಾರಿಗಳು ಶಾಸಕರಲ್ಲಿ ದೂರಿತ್ತಿದ್ದರು.

ಅಲ್ಲದೆ ಈ ಅಸ್ಪತ್ರೆ ಆಯುವರ್ೇದ ಪದ್ದತಿಯ ಆಸ್ಪತ್ರೆ ಅಲ್ಲದಿದ್ದರೂ, ಅಯುವರ್ೇದ ವೈದ್ಯರೊಬ್ಬರನ್ನು ನಿಯಮ ಮೀರಿ ನೇಮಿಸಿಕೊಂಡಿರುವುದು ಈ ರೀತಿಯ ಅನೇಕ ಸಮಸ್ಯೆಗಳಿಗೆ ಮತ್ತು ರೋಗಿಗಳಿಗೆ ಅಪಾಯಕ್ಕೆ ಕಾರಣವಾಗಿದೆ
ಎಂದು ಶಾಸಕರಿಗೆ ಈ ಸಂದರ್ಭ ದೂರು ನೀಡಲಾಯಿತು.
ಕಾಪರ್ೋರೇಟರ್ ತಿಲಕ್ ರಾಜ್ ಕೃಷ್ಣಾಪುರ,
ಅಗ್ನಿ ಶಾಮಕ ಇಲಾಖೆಯ ಅರ್ಎಫ್ಒ ತಿಪ್ಮೇಸ್ವಾಮಿ, ಅವರ ಸಹೋದ್ಯೋಗಿಗಳು, ಕಾಂಗ್ರೆಸ್ ಮುಂದಾಳು ಅಬ್ದುಲ್ ಸತ್ತಾರ್, ಯುವ ಕಾಂಗ್ರೆಸ್ನ ಹಬೀಬ್, ಪುರುಷೋತ್ತಮ ದೇವಾಡಿಗ ಮುಕ್ಕ ಮೊದಲಾದವರು ಅಂತಿಮ ದರ್ಶನ ಪಡೆದರು.
