2014-08-16ಸುದ್ದಿ9ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪಾಲಿನ ಸಂಸದರ ನಿಧಿಯಿಂದ ಈ ಸಾಲಿನ 2ನೇ ಹಂತದಲ್ಲಿ 1.10ಕೋಟಿ ರೂ.ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
ಈ ಹಂತದಲ್ಲಿ 43ಕಾಮಗಾರಿಗಳ ಅನುಷ್ಠಾನಕ್ಕಾಗಿ 1.5ಕೋಟಿ ರೂ.ಅನುದಾನ ಮಂಜೂರಾಗಿದ್ದು, ಅದರಲ್ಲಿ 1.10ಕೋಟಿ ಬಿಡುಗಡೆಯಾಗಿದೆ.

ಮಂಗಳೂರು ಅಸೆಂಬ್ಲಿ ಕ್ಷೇತ್ರದ 1 ಕಾಮಗಾರಿಗೆ 2.25 ಲಕ್ಷ, ಮಂಗಳೂರು ನಗರ ಉತ್ತರ ಕ್ಷೇತ್ರದ 8 ಕಾಮಗಾರಿಗೆ 20.25 ಲಕ್ಷ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2 ಕಾಮಗಾರಿಗಳಿಗೆ ರೂ.4ಲಕ್ಷ, ಮೂಡಬಿದಿರೆ ಕ್ಷೇತ್ರ 5 ಕಾಮಗಾರಿಗಳ ಆರಂಭಕ್ಕೆ 12ಲಕ್ಷ ಬಿಡುಗಡೆಯಾಗಿದೆ.
ಬಂಟ್ವಾಳ ಕ್ಷೇತ್ರದ 10 ಕಾಮಗಾರಿಗಳ ಅನುಷ್ಠಾನಕ್ಕೆ 25.50 ಲಕ್ಷರೂ., ಪುತ್ತೂರು ಕ್ಷೇತ್ರದ 12 ಕಾಮಗಾರಿಗೆ 36.50ಲಕ್ಷ, ಸುಳ್ಯ ಕ್ಷೇತ್ರದ 2 ಕಾಮಗಾರಿಗಳ ಅನುಷ್ಠಾನಕ್ಕೆ ರೂ.4.50 ಲಕ್ಷ, ಬೆಳ್ತಂಗಡಿ ಕ್ಷೇತ್ರದ 3 ಕಾಮಗಾರಿಗಳಿಗೆ ರೂ..5.25 ಲಕ್ಷದ ಚೆಕ್ ನೀಡಲಾಗಿದೆ.
