ಕುಡುಪು : ಪುರಾಣ ಪ್ರಸಿದ್ಧವಾದ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ನಗಾರಾಧನೆ ಕ್ಷೇತ್ರವಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ನೂತನ ವಿಶಿಷ್ಟ ದಾರು ಶಿಲ್ಪಗಳನ್ನೊಳಗೊಂಡ ಗರ್ಭಗುಡಿ ನಿರ್ಮಾಣಗೊಳ್ಳುತ್ತಿದೆ. ಜೊತೆಗೆ ಭೂಪುರಾಕಾರದ ನೂತನ ಭದ್ರಾ ಸರಸ್ವತಿ ತೀರ್ಥ ಸರೋವರ ನವೀಕರಣಗೊಂಡಿದೆ. ಈ ಕ್ಷೇತ್ರಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿರುವುದು ವ್ಯಕ್ತವಾಗಿದೆ. ಇಲ್ಲಿ ಶ್ರೀ ಅನಂತ ಪದ್ಮನಾಭ, ಶ್ರೀ ಮಹಾಶೇಷ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರು ತ್ರಿಕಾಲ ಪೂಜೆಯೊಂದಿಗೆ ಆರಾಧಿಸಲ್ಪಡುತ್ತಿದ್ದಾರೆ. ಇಲ್ಲಿ ಎರಡು ಹಂತದಲ್ಲಿ ಅಂದಾಜು ಎರಡು ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ.
ಫೆಬ್ರವರಿ 18ರಿಂದ 25ರವರೆಗೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಜರುಗಲಿದ್ದು, ಕ್ಷಿಪ್ರಗತಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಫೆ. 3ರಂದು ಈ ನಿಮಿತ್ತ ಕುಡುಪು ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ಮಂದಿರದಲ್ಲಿ ಆಡಳಿತ ಮಂಡಳಿಯು ಪತ್ರಿಕಾಗೋಷ್ಠಿ ಕರೆದು ಬ್ರಹ್ಮ ಕಲಶೋತ್ಸವದ ಬಗ್ಗೆ ಮಾಹಿತಿ ನೀಡಿತು. ಫೆ. 18ರಂದು ಮಂಗಳೂರು, ಫೆ. 20ರಂದು ಸುರತ್ಕಲ್‍ನಿಂದ ಹಾಗೂ ಫೆ. 22ರಂದು ಮೂಡಬಿದ್ರಿಯಿಂದ(ಕೈಕಂಬ) ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಹೊರೆ ಕಾಣಿಕೆ ಆಗಮಿಸಲಿದೆ.
ವೇದಿಕೆಯಲ್ಲಿ ಪತ್ರಕರ್ತ ಜಗನ್ನಾಥ ಬಾಳ, ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ನರಸಿಂಹ ತಂತ್ರಿ. ಗೌರವಾಧ್ಯಕ್ಷ ಚಂದ್ರಹಾಸ ರೈ, ಮೊಕ್ತೇಸರ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಕೆ. ಬ್ರಹ್ಮಕಲಶೋತ್ಸವ ಸಮಿತಿಯ ಪ್ರ.ಸಂಚಾಲಕ ಹಾಗೂ ವಾಸ್ತು ತಜ್ಙರು ಕೆ. ಕೃಷ್ಣ ರಾಜ ತಂತ್ರಿ. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಸುದರ್ಶನ ಕುಡುಪು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರ. ಕಾರ್ಯದರ್ಶಿ ಕೆ.ಸುಜನ್ ದಾಸ್ ಕುಡುಪು.ಬ್ರಹ್ಮಕಲಶೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ವಾಸುದೇವ ರಾವ್ ಕುಡುಪು. ಅನ್ನಸಂತರ್ಪಣಾ ಸಮಿತಿಯ ಪ್ರ.ಸಂಚಾಲಕ ಶೆಡ್ಡೆ ಮಂಜುನಾಥ ಭಂಡಾರಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಹಾಗೂ ಕೋಶಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಕೆ. ಮನೋಹರ ಭಟ್, ಕೆ.ಬಾಲಕೃಷ್ಣ ಕಾರಂತ, ಉಗ್ರಾಣ ಸಮಿತಿ ಸಂಚಾಲಕ ವಿನಯಾನಂದ, ಹೊರೆಕಾಣಿಕೆಯ ಉಸ್ತುವರಿ ಪುಷ್ಪರಾಜ್ ಪೂಜಾರಿ, ಉದಯ ಕುಮಾರ್ , ಪಾಕಶಾಲೆಯ ಉಸ್ತುವರಿ ರಾಘವೇಂದ್ರ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಅನ್ನಸಂತರ್ಪಣೆಯ ಉಸ್ತುವರಿ ಸುಂದರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರಭಾಕರ ಭಟ್ ಇದ್ದರು.
