ಬೆಂಗಳೂರು: ಎಡಕಲ್ಲು ಗುಡ್ಡದ ಮೇಲೆ ಚಿತ್ರ ಖ್ಯಾತಿಯ ಕನ್ನಡ ಚಲನಚಿತ್ರದ ಹಿರಿಯ ನಟ ಚಂದ್ರಶೇಖರ
ವರು ಹೃದಯಾಘಾತದಿಂದ ಕೆನಡಾದಲ್ಲಿ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಶೇಖರ ಅವರು ಶನಿವಾರ ಬೆಳಗಿನ ಜಾವ ಕೆನಡಾದ ಒಟ್ಟಾವಾದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಶೀಲಾ ಮತ್ತು ಮಗಳು ತಾನಿಯಾರನ್ನ ಅಗಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ಹಾಗೂ ಖಳನಾಯಕನ ಪಾತ್ರಗಳಲ್ಲಿ ಮಿಂಚಿದರು. ಅವರು ನಟಿಸಿದ ಎಡಕಲ್ಲು ಗುಡ್ಡದ ಮೇಲೆ ಚಿತ್ರವೂ ಒಳ್ಳೆ ಖ್ಯಾತಿ ತಂದುಕೊಟ್ಟಿತ್ತು. . ಡಾ. ರಾಜ್ಕುಮಾರ್ರಂತಹ ಮಹಾನ್ ನಟರೊಂದಿಗೆ ರಾಜ ನನ್ನ ರಾಜ ಚಿತ್ರದಲ್ಲಿ ಚಂದ್ರಶೇಖರ್ ನಟಿಸಿದ್ದಾರೆ.

