ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಶುಕ್ರವಾರ ಬೆಳಗ್ಗಿನ ಜಾವ ದಾಖಲಿಸಲಾಗಿದೆ.
ಗುರುವಾರ ರಾತ್ರಿ ಶಿವಪೂಜೆ ಮುಗಿದ ಬಳಿಕ ಸ್ವಾಮೀಜಿಯವರಿಗೆ ಕಫ, ಜ್ವರ ಕಾಣಿಸಿಕೊಂಡು ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಬಳಿಕ ಅವರನ್ನ ಬೆಳಗ್ಗಿನ ಜಾವ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನುರಿತ ವೈದ್ಯರ ತಂಡವೊಂದು ಚಿಕಿತ್ಸೆ ನೀಡುತ್ತಿದೆ.

