ನವದೆಹಲಿ: ಚುನಾವಣೆಯನ್ನು ಗುರಿಯಾಗಿಸಿ ಬಜೆಟ್ ಮಂಡಿಸುವುದನ್ನು ನಾನು ಒಪ್ಪುವುದಿಲ್ಲ. ಜನರಿಗೆ ಬೇಕಾದ ಬಜೆಟ್ ರೂಪಿಸುವುದೇ ನಮ್ಮ ಧ್ಯೇಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸೋಮವಾರ ಖಾಸಗಿ ಸುದ್ದಿವಾಹಿನಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಪ್ರಗತಿಯ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆದರೆ ಇದಲ್ಲ ಮುಖ್ಯ. ನನಗೆ ಜನರು ನೀಡುವ ಸರ್ಟಿಫಿಕೇಟ್ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಮುಂದಿನ ಬಜೆಟ್ ಜನಪ್ರಿಯವಾಗಿರದೆ, ಅಭಿವೃದ್ಧಿ ಪರವಾಗಿರಲಿದೆ. ಅಲ್ಲದೆ, ದೇಶದ ಜನರಿಗೆ ಏನು ಬೇಕೋ, ಅವರ ಆಶಯಗಳನ್ನು ಪೂರೈಸುವ ಆಧಾರದ ಮೇಲೆ ಯೋಜನೆ ರೂಪಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಯುವ ಭಾರತವನ್ನು ವಿಶ್ವದ ಮುಂದೆ ಭವ್ಯವಾಗಿ ಪ್ರದರ್ಶಿಸುವುದೇ ನಮ್ಮ ಧ್ಯೇಯವಾಗಿದ್ದು, ಈಗಾಗಲೇ ಇದರಲ್ಲಿ ಕೆಲವು ಹೆಜ್ಜೆಗಳನ್ನು ಇಟ್ಟಿದ್ದೇವೆ ಎಂದವರು, 1000-50 ರೂ. ಮೌಲ್ಯದ ನೋಟು ನಿಷೇಧವನ್ನು ದೇ ವೇಳೆ ಸಮರ್ಥಿಸಿಕೊಂಡರು.

