images

ಮಂಗಳೂರು: ಇಂದು ಬೆಳಗ್ಗೆ ನಡೆದ ಮೆಂಡನ್ ಗ್ಯಾಂಗ್ ನ ರೌಡಿಶೀಟರ್ ಭರತೇಶ್ ಸಹೋದರ ಶಿವರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ರೋಪಿಯ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದ್ದು, ಭರತೇಶ್ ಮೇಲಿನ ದ್ವೇಷದಲ್ಲಿ ಈ ಹತ್ಯೆ ನಡೆದಿರುವ ಬಗ್ಗೆ ಪೊಲೀಸರು ಶಂಕಿಸಿದ್ದು, ಈ ಹಿನ್ನೆಲೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ: ನಗರದ ತಣ್ಣೀರುಬಾವಿ ಬಳಿ ಮನೆಯೊಂದರಲ್ಲಿ ಟೆರೇಸ್ ಮೇಲೆ ಮಲಗಿದ್ದ ಕರುಣಾಕರ ಎಂಬವರ ಪುತ್ರ ಶಿವರಾಜ್ ಅವರನ್ನು ಇಂದು ಮುಂಜಾನೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ.

By Suddi9

Leave a Reply

Your email address will not be published. Required fields are marked *