23071393-standard

ಹರಿಯಾಣ: ದ್ವಿತೀಯ ಪಿಯುಪಿ ವಿದ್ಯಾರ್ಥಿಯೋರ್ವ ತನ್ನ ಕಾಲೇಜಿನ ಪ್ರಾಂಶುಪಾಲರ ಮೇಲೆ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ಯಮುನನಗರದಲ್ಲಿ ಶನಿವಾರ ನಡೆದಿದೆ.

ರಿಟಾ ಛಾಬ್ರಾ ಮೃತಪಟ್ಟ ಪ್ರಾಂಶುಪಾಲ ಎಂದು ಗುರುತಿಸಲಾಗಿದೆ.

12ನೇ ತರಗತಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ತನ್ನ ತಂದೆಯ ಪರವಾನಗಿ ಹೊಂದಿರುವ ಬಂದೂಕನ್ನು ಬಳಸಿ ಪ್ರಾಂಶುಪಾಲರಾದ ರಿಟಾ ಛಾಬ್ರಾ ಅವರನ್ನು ಶಾಲೆಯ ಅವರ ಕೊಠಡಿಯಲ್ಲೇ ಗುಂಡು ಹರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ 12ನೇ ತರಗತಿ ವಿದ್ಯಾರ್ಥಿಯನ್ನು ತಾತ್ಕಾಲಿಕವಾಗಿ ಶಾಲೆಯಿಂದ ಹೊರಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *