Mathra bhoomi logoಕೈಕಂಬ: ಮಾತೃಭೂಮಿ ಸೌಹಾರ್ದ ಸಹಕಾರಿ ನಿ. ಆಡಳಿತ ಕಛೇರಿ “ಮಾತೃಧಾಮದ” ಉದ್ಘಾಟನೆಯು ಜ.21 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಗುರುಪುರ ಕೈಂಬದ ಪೊಂಪೈ ಸ್ಕ್ವೇರ್ ನಲ್ಲಿ ಜರುಗಲಿದೆ.

2006 ರಲ್ಲಿ ನೊಂದಾವಣೆಗೊಂಡು 2007ರಲ್ಲಿ 227 ಮಂದಿ ಸದಸ್ಯರನ್ನೊಳಗೊಂಡ 3.35 ಲಕ್ಷ ರೂ.ಷೇರು ಬಂಡವಾಳದೊಂದಿಗೆ  ಕಯಕಂಬದದಿತ್ಯ ಟವರ್ ಕಾಯಾಱರಂಭಗೊಂಡ  ಮಾತೃಭೂಮಿ ಸೌಹಾರ್ದ  ಸಹಕಾರಿಯು ಇಂದು ಜಿಲ್ಲೆಯ ನಾನಾ ಭಾಗದಲ್ಲಿ  ಸೌಹಾರ್ದ ಸಹಕಾರಿಯಾಗಿ ರೂಪುಗೊಂಡಿದೆ. ಇದೀಗ ಮಾತೃಭೂಮಿ  ಸೌಹಾರ್ದ ಸಹಕಾರಿಯು 8 ಶಾಖೆಗಳನೊಳಗೊಂಡು  ಆಡಳಿತ ಕಚೇರಿಯನ್ನು ಬಹಳ  ಸುಸಜ್ಜಿತವಾದ ಸ್ವಂತ ಕಟ್ಟಡದೊಂದಿಗೆ  ಮಾತೃಧಾಮದ ಉದ್ಘಾಟನೆಗೊಳ್ಳಲಿದೆ.

ಸಂಸ್ಥೆಯು  ಎಲ್ಲಾ  ಶಾಖೆಗಳಲ್ಲಿ ಪೂರ್ಣಪ್ರಮಾಣದ  ಕಂಪ್ಯೂಟರೀಕರಣಗೊಂಡಿದ್ದು  ಕೇಂದ್ರೀಕೃತ ಸಾಪ್ಟ್ ವೇರ್ ಬಳಸಿ  ಎಲ್ಲಾ ಶಾಖೆಗಳಲ್ಲಿ  ದಿನ ನಿತ್ಯದ ಎಲ್ಲಾ ವ್ಯವಾಹಾರದ ಚಿತ್ರಣವನ್ನು  ಕೇಂದ್ರ ಕಚೇರಿಯಲ್ಲಿ ಪಡೆಯುವಂತೆ ಮಾಡಲಾಗಿದೆ.

ಉದ್ಘಾಟನಾ ಕಾರ್ಯಕ್ರಮ:
ಭಾರತ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಮಾತೃಧಾಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ. ಘನ ಉಪಸ್ಥಿತಿ ಜಿಲ್ಲಾ ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ ಎಸ್. ಕೆ.ಉಡುಪಿ, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಭಾಗವಹಿಸಲಿದ್ದಾರೆ.

ಮಾತೃಭೂಮಿ ಸೌಹಾರ್ದಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ,ಉಪಾಧ್ಯಕ್ಷ ಕೆ.ಟಿ.ಸುವರ್ಣ, ಆಡಳಿತ ನಿರ್ದೇಶಕ ಕೃಷ್ಣ ಕೊಂಪದವು ಹಾಗೂ ನಿದೇಶಕರಾದ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವೆಂಕಟೇಶ್ ನಾವಡ, ಪೂವಪ್ಪ ಕುಂದರ್, ಭಾಸ್ಕರ ವಿ.ಶೆಟ್ಟಿ, ಪದ್ಮನಾಭ ರಾವ್, ಶ್ರೀಧರ ರಾವ್, ಪಾವನಾ ಜೆ. ಶೆಟ್ಟಿ, ವಿದ್ಯಾ ವಿ. ಕಾಮತ್,ಮತ್ತು ಸಿಬ್ಭಂದಿ ವರ್ಗ ಉಪಸ್ಥಿತರಿರುವರು.ಎಂದು ಮಾತೃಭೂಮಿ ಸೌಹಾರ್ದ ಸಹಕಾರಿಯ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *