12

ಅಥಣಿ: ಶಾಲಾ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗೊಂಡಿರುವ ಘಟನೆ ಇಲ್ಲಿನ ಜೇವರ್ಗಿ ಸಂಕೇಶ್ವರ್ ರಾಜ್ಯ ಹೆದ್ದಾರಿ ಬಡಚಿ ಗ್ರಾಮದ ಹೊಮೇಲೆ ಗ್ರಾಮದ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ಶಾಲಾ ವಾಹನ ಚಾಲಕ ಅರಟಾಳದ ಗ್ರಾಮದ ನಿವಾಸಿ ಸಿದ್ಧನಗಿರಿ ಪೂಜೆರಿ(25), ಬೈಕ್ ಲ್ಲಿದ್ದ ಯಲ್ಲಡಗಿ ಗ್ರಾಮದ  ದಾನಪ್ಪ ಮಗದುಮ್(40) ಮನೋಹರ ದೊಡಮನಿ(35) ಅಪ್ಪಾಸಾಬ ಮರಠೆ(46) ಮೃತ ಪಟ್ಟವರೆಂದು ಗುರುತಿಸಲಾಗಿದೆ.

ದಾನಪ್ಪ, ಮನೋಹರ, ಅಪ್ಪಾಸಾಬ ಅವರು ಅರಟಾಳ ಜಾತ್ರೆಗೆ ತೆರಲಿ ತಮ್ಮ ಗ್ರಾಮಕ್ಕೆ ಬೈಕ್ ನಲ್ಲಿ ಹಿಂದಿರುಗುತ್ತಿದ್ದ ವೇಳೆ ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಅಪಘಾತದಲ್ಲಿ ಶಾಲಾ ಮಕ್ಕಳ ಜೀವ ಉಳಿಸಲು ವಾಹನವನ್ನು ರಸ್ತೆ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದಿದ್ದರಿಂದ ಚಾಲಕ ಪೂಜೆರಿಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

52

ಈ ಘಟನೆಯಲ್ಲಿ 15ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಗಾಯಾಳುಗಳನ್ನು ಅಥಣಿ ತಾಲೂಕಾ ಆಸ್ಪತ್ರೆ ಮತ್ತು ಮಹಾರಾಷ್ಟ್ರದ ಮಿರಜ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ.

ಈ ಬಗ್ಗೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By Suddi9

Leave a Reply

Your email address will not be published. Required fields are marked *