ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮ ಪಂಚಾಯತ್ ನ ಬಿಯಪಾದೆಯಲ್ಲಿ   ಕಾಂಗ್ರಸ್ ಪಕ್ಷದ ಹಿಂದೂ ವಿರೋಧಿ  ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ  ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರು ಪಕ್ಷವನ್ನು  ತ್ಯಜಿಸಿ ಭಾರತಿಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
IMG-20180107-WA0039
ಭಾನುವಾರ ನಡೆದ ಪಕ್ಷದ ಸಭೆಯಲ್ಲಿಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಸಂದೀಪ್ ಪೂಜಾರಿ ಎಕ್ಕುಡೇಲು , ವಿನೋದ್ ನಾಯ್ಕ ಪೆರ್ಲ , ದೇವಯ್ಯ ಪೂಜಾರಿ ಬಿಯಪಾದೆ ,ಶರತ್ ಪೂಜಾರಿ ಎಕ್ಕುಡೇಲು , ಸೋಮಶೇಖರ್ ಗೌಡ ಕುದ್ದುಂಜ , ದಲಿತ ಮುಖಂಡ ಶೀನ ಪೆರ್ಲ , ಸಿದ್ದು ಪೆರ್ಲ , ನಿತೀಶ್ ಪೆರ್ಲ, ಜಯಂತಿ ನಾಯಕ್ , ವಿಜಯ ತಿರ್ಕೊಟ್ಟು , ರುಕ್ಮಿಣಿ ಪೆರ್ಲ ಮೊದಲಾದವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.   ಬಂಟ್ವಾಳ ವಿಧಾನಸಭಾ ಕ್ಷೇತ್ರದ  ಬಿಜೆಪಿ ನಾಯಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು   ಬಿ.ಜೆ.ಪಿ ಯ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಬಳಿಕ ಮಾತನಾಡಿದ ರಾಜೇಶ್ ನಾಯ್ಕ್ ಅವರು,ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ದಿ ನೀತಿಯಿಂದ ಕರ್ನಾಟಕದಲ್ಲೂ ಪರಿವರ್ತನಾ ಕ್ರಾಂತಿಯಾಗಲಿದೆ.
ಮುಂದಿನ ಚುನಾವಣೆಯಲ್ಲಿ  ಬಂಟ್ವಾಳ ಕ್ಷೇತ್ರದಲ್ಲೂ ಬಿಜೆಪಿಯ ಗೆಲುವಿಗೆ   ಸಮರ್ಪಣಾ ಭಾವದಿಂದ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.
IMG-20180107-WA0038
ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ದೇವದಾಸ್ ಶೆಟ್ಟಿಯವರು  ಮಾತನಾಡಿ, ಸಂಘಟನಾತ್ಮಕ ಪ್ರಯತ್ನದಿಂದ ನಾವೆಲ್ಲರೂ ಪಕ್ಷದ  ಗೆಲುವಿಗೆ ಪಣತೊಡಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಬಿ ಜೆ.ಪಿ ಕ್ಷೇತ್ರ ಉಪಾಧ್ಯಕ್ಷರಾದ ದೇವಪ್ಪ  ಪೂಜಾರಿ , ಸರಪಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಲೀಲಾವತಿ ದರ್ಣಪ್ಪ ಪೂಜಾರಿ , ಪಂಚಾಯತ್ ಸದಸ್ಯರಾದ ದನಂಜಯ ಶೆಟ್ಟಿ ನಾಣ್ಯಪ್ಪ ಪೂಜಾರಿ ಬೆಳ್ಳೂರು , ಸರಪಾಡಿ ಶಕ್ತಿಕೇಂದ್ರದ ಅಧ್ಯಕ್ಷರಾದ ಶಶಿಕಾಂತ್ ಶೆಟ್ಟಿ , ಕಾರ್ಯದರ್ಶಿ ಶಿವಪ್ಪ ಗೌಡ , ಪಕ್ಷದ ಪ್ರಮುಖರಾದ ರಾಮಕೃಷ್ಣ ಮಯ್ಯ , ವಿಠಲ ಕೋಟ್ಯಾನ್ , ದಯಾನಂದ ಶೆಟ್ಟಿ , ಜಿಲ್ಲಾ ಬಿ.ಜೆ.ಪಿ ಯುವಮೋರ್ಚಾದ ಕಾರ್ಯದರ್ಶಿಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *