ಬಂಟ್ವಾಳ:ಸಮಾಜದಲ್ಲಿ ಸಾಹಿತ್ಯದ ಮೂಲಕ ಜನತೆಗೆ ಉತ್ತಮ ಸಂಸ್ಕಾರ ಮತ್ತು ಗೌರವಯುತ ಜೀವನ ನಡೆಸುವ ಬಗ್ಗೆ ಶ್ರೇಷ್ಠ ಸಂದೇಶ ಸಿಗುತ್ತದೆ ಎಂದು ಮೊಡಂಕಾಪು ದೀಪಿಕಾ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಹೇಳಿದ್ದಾರೆ.

6btl-Kalladka
ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಇಲ್ಲಿನ ಪ್ರಮಾಥಿ ಕನ್ನಡ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಏರ್ಪಡಿಸಿದ್ದ ನೀರ್ಕಜೆ ಸುಬ್ರಾಯ ಭಟ್ ಮತ್ತು ಸಹೋದರರ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಮೋಹನ್ ರಾವ್, ಕನ್ನಡ ಭವನ ನಿರ್ಮಾಣ ಸಮಿತಿ ಸಂಚಾಲಕ ಗಂಗಾಧರ ಭಟ್ ಕೊಳಕೆ, ನಿವೃತ್ತ ಪ್ರಾಧ್ಯಾಪಕ ಕೃಷ್ಣಶರ್ಮ ಉಪಸ್ಥಿತರಿದ್ದರು.

ಪ್ರಮಾಥಿ ಕನ್ನಡ ಸಂಘದ ನಿರ್ದೇಶಕ ಯತಿರಾಜ್ ಸ್ವಾಗತಿಸಿ, ಸಂಘದ ಸದಸ್ಯೆ ಚೈತ್ರ ವಂದಿಸಿದರು. ಸಂಘದ ಕಾರ್ಯದರ್ಶಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *