ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಪ್ರಕಟಗೊಂಡ ವಿಟ್ಲದ ಮೈತ್ರಿ ಭಟ್ ಅವರ ಕವನ ಸಂಕಲನ ‘ಅಂತರಂಗದ ಹೆಜ್ಜೆಗಳು’ ಇತ್ತೀಚೆಗೆ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬಿಡುಗಡೆಗೊಂಡಿತು.
2016ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನದನ್ವಯ ಈ ಕೃತಿಯನ್ನು ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಕವಯಿತ್ರಿಯನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರಸ್ತುತ ಮೈತ್ರಿ ಭಟ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಯುಜಿಸಿಯ ಕಿರಿಯ ವಿದ್ಯಾರ್ಥಿ ವೇತನ(ಎಖಈ)ದೊಂದಿಗೆ ಸಂಶೋಧನಾ ನಿರತರಾಗಿದ್ದಾರೆ.

