ಮಂಡ್ಯ: ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಶ್ರೀರಂಗಪಟ್ಟಣ ದ ಬಲಮುರಿ ನದಿಯಲ್ಲಿ ರವಿವಾರ ನಡೆದಿದೆ.
ಮಂಗಳೂರಿನ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಸುಹೈಲ್ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಸುಹೈಲ್ ಕೇರಳ ಮೂಲದವ ಎನ್ನಲಾಗಿದ್ದು, ಈತ ತನ್ನ 15 ಸ್ನೇಹಿತರೊಂದಿಗೆ ಪೊಲೀಸರ ಕಣ್ತಪ್ಪಿಸಿ ಇಲ್ಲಿಗೆ ಬಂದಿದ್ದಾರೆ. ಈ ವೇಳೆ ಸುಹೈಲ್ ಈಜಲು ನದಿಗೆ ಇಳಿದಿದ್ದು, ನೀರಿನ ಸೆಳತಕ್ಕೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
