BGK-ACCIDENT-8

ಬಾಗಲಕೋಟೆ: ಕಾರೊಂದು ನಿಂತಿದ್ದ ಲಾರಿಗೆ  ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ  ಒಂದೇ ಕುಟುಬಂದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ದಾರುಣ ಘಟನೆ ಜಿಲ್ಲೆಯ ಹುನಗುಂದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಸುಕಿನ ವೇಳೆ ನಡೆದಿದೆ.

ಮೃತರನ್ನು ಪಂಕಜ್ ಸಿಂಗಿ (48), ಉಮಾಬಾಯಿ ಸಿಂಗಿ (48), ಪುಷ್ಪಾಬಾಯಿ ಧರಕ್ (62), ಶ್ರೀಕಾಂತಾಬಾಯಿ ಧರಕ್ (65) ಹಾಗೂ ಗಾಯಾಳುಗಳನ್ನು ದೀಪಕ್, ಸುನಿಲ್ ಹಾಗೂ ಶ್ರೀಧರ್  ಎಂದು ಗುರುತಿಸಲಾಗಿದೆ.

ಒಂದೇ ಕುಟುಂಬದವರು ಎನ್ನಲಾದ ಇವರು, ಬಳ್ಳಾರಿಯಿಂದ ನಿಶ್ಚಿತಾರ್ಥ ಮುಗಿಸಿಕೊಂಡು ಬಾಗಲಕೋಟೆಗೆ ಹಿಂದಿರುಗುತ್ತಿದ್ದ ವೇಳೆ, ಕಾರು ಚಾಲಕ ನಿದ್ದೆಗೆ ಜಾರಿದ್ದರಿಂದ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.

ಇನ್ನೂ ಗಾಯಾಳುಗಳನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭಿಸಿವೆ.

ಈ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *