ಬಂಟ್ವಾಳ: ಕುಲಾಲ ಜನಾಂಗದ ಶ್ರೆಯೋಭಿವೃದ್ಧಿಗಾಗಿ ಕಚೇರಿ ಹೊಂದಲು ನಿವೇಶನ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬಂಟ್ವಾಳ ತಾಲೂಕು ಕುಲಾಲರ ಯಾನೆ ಕುಂಬಾರರ ಯುವ ವೇದಿಕೆ ಹಾಗೂ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ತಾಲೂಕಿನ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಂಬಾರರ ಯುವ ವೇದಿಕೆಯ ಕುಲಾಲ ಉಪಾಧ್ಯಕ್ಷ ಸುಕುಮಾರ್ ಬಂಟ್ವಾಳ, ಹಿರಿಯ ನಾಗರಿಕರ ಕ್ಷೇಮಭಿವೃದ್ಧಿ ಸಂಘದ ಅಧ್ಯಕ್ಷ ಸುಂದರ್ ಬಿ., ಪ್ರಮುಖರಾದ ಟಿ. ಶೇಷಪ್ಪ ಮೂಲ್ಯ, ವಿಠಲ ಬಂಗೇರ, ಮಾದವ ಕುಲಾಲ್, ಉಮೇಶ್ ಕುಲಾಲ್, ಗಂಗಾದರ ಶೇರ, ಯಾದವ ಕುಲಾಲ್ ಅಗ್ರಬೈಲು, ಸುಂದರ ಬಿ. ಮತ್ತಿತರರು ಹಾಜರಿದ್ದರು.

