603.

ಸಿನೆಮಾ ಸಂತೆ: ಮೈಸೂರಿನ ಎಚ್.ಡಿ.ಕೋಟೆ ಮುಖ್ಯ ರಸ್ತೆಯಲ್ಲಿರುವ ಜಯಪುರದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದಕೀಡಾಗಿರುವ ಬೆನ್ನಲ್ಲೆ ಕಿರುತರೆ ನಟರೋರ್ವರು ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿರುವುದು ಇದೀಗ ಬೆಳಕಿಗೆ ಬಂದಿದೆ.

ಈ ನಟ ಬೇರಾರೂ ಅಲ್ಲ ಅವರೇ ಕಿರುತೆರೆ ನಟ ಆರ್ವ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕಿರುತೆರೆ ನಟ ಆರ್ವ, ವಿಷ್ಣು ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಬೇಕೇ? ಬೆಂಗಳೂರಿನಲ್ಲಿ ನಿರ್ಮಿಸಬೇಕೆ ಎಂಬ ಚರ್ಚೆ ನಡೆಯುತ್ತಿದ್ದು, ಸ್ಮಾರಕ ನಿರ್ಮಾಣಕ್ಕೆ ಭೂಮಿಯ ಸಮಸ್ಯೆ ಎದುರಾಗಿದ್ದರೂ ಸ್ಮಾರಕ ನಿರ್ಮಾಣದ ವಿಷಯದಲ್ಲಿ ಸರ್ಕಾರ ಹೆಚ್ಚಿನ ಗಮನ ನೀಡದಿರುವುದು ವಿಷ್ಣು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಆದ್ದರಿಂದ ಚಾಮರಾಜನಗರ ಜಿಲ್ಲೆಯಲ್ಲಿ ಸ್ಮಾರಕ ನಿರ್ಮಿಸಲು ಮುಂದಾದರೆ ಸ್ಮಾರಕಕ್ಕೆ ಅಗತ್ಯ ಇರುವಷ್ಟು ಭೂಮಿಯನ್ನು ಜಿಲ್ಲೆಯ ಬಸವನಟ್ಟಿಯಲ್ಲಿ ನೀಡುವುದಾಗಿ ಹೇಳಿದ್ದಾರೆ.

ಭೂಮಿಗೆ ನಯಾ ಪೈಸೆ ಬೇಡ: ಬಸವನಟ್ಟಿಯಲ್ಲಿ ಒಂದು ಎಕರೆ ಪ್ರದೇಶವನ್ನು ಬಿಟ್ಟುಕೊಡಲು ನನ್ನ ಪೋಷಕರು ಅನುಮತಿ ನೀಡಿದ್ದಾರೆ. ಭಾರತಿ ಅವರಿಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಭೂಮಿ ವಿವಾದವಿದ್ದರೆ, ನಮ್ಮೂರಿಗೆ ಬಂದು ಕಟ್ಟಲಿ. ಭೂಮಿಗೆ ನಯಾ ಪೈಸೆ ತೆಗೆದುಕೊಳ್ಳುವುದಿಲ್ಲವೆಂದು ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *