ಬಂಟ್ವಾಳ: ವಿಶ್ವಹಿಂದೂ ಪರಿಷತ್ನ ಸ್ಫಾಪನಾ ವರ್ಷದ ಸುವರ್ಣಮಹೋತ್ಸವದ ಅಂಗವಾಗಿ ದೇಶಾಧ್ಯಂತ ಜನಜಾಗೃತಿ ಹಾಗೂ ಧಾಮರ್ಿಕ ಜಾಗೃತಿಗಾಗಿ ಉತ್ಸವವು ಅರ್ಥಪೂರ್ಣವಾಗಿ ಆಚರಿಸುವ ಸದುದ್ದೇಶದಿಂದ ಶ್ರೀ ಕೃಷ್ಣ ಜನ್ಮéಾಷ್ಟಮಿಯಂದು ಮಹಾರಾಷ್ಟ್ರದ ಸಾಂದೀಪನೀ ಆಶ್ರಮದಲ್ಲಿ ಉದ್ಘಾಟನೆಗೊಂಡು ವರ್ಷಪೂತರ್ಿ ಹಿಂದೂ ವಿಚಾರಧಾರೆಯು ಜಗತ್ತಿನಾದ್ಯಂತ ಪಸರಿಸುವಂತೆ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು, ಇಂತಹ ಮಹಾತ್ಕಾರ್ಯದಲ್ಲಿ ಪ್ರತಿಯೊಬ್ಬರು ಕೈ ಜೋಡಿಸುವುದು. ಆ ಪ್ರಯುಕ್ತ ವಿಶ್ವಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ಇದರ ವತಿಯಿಂದ ಆಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಅಗಷ್ಟ್ 14ರಂದು ಸಂಜೆ 4.30ಕ್ಕೆ ಬಂಟ್ವಾಳ ಬೈಪಾಸ್ ಬಳಿ ಶ್ರೀರಾಮ ಮಂದಿರದ ವಠಾರದಲ್ಲಿ ದ್ವಿಚಕ್ರ ವಾಹನಜಾಥಾವನ್ನು ಸಮಾಜ ಸೇವಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಜಿ.ಆನಂದ ಬಂಟ್ವಾಳ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಬಂಟ್ವಾಳ ಕೆಳಗಿನಪೇಟೆ ಪಾಣೆಮಂಗಳೂರು ಪೇಟೆಯಾಗಿ ಕಲ್ಲಡ್ಕ ಅಲ್ಲಿಂದ ರಾಷ್ಟೀಯ ಹೆದ್ದಾರಿ ಮೂಲಕ ಬಿ.ಸಿ.ರೋಡ್ ಮೂಲಕ ತಾಲೂಕು ಕಚೇರಿ ಮುಂಬಾಗದಲ್ಲಿ ಸಮಾಪ್ತಿಯಾಗಲಿದೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವಹಿಂದೂ ಪರಿಷತ್ನ ತಾಲೂಕು ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ತಿಳಿಸಿದ್ದಾರೆ.
