ಬಡಕಬೈಲು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ‘ಮನೆ ಮನೆಗೆ ಕಾಂಗ್ರೆಸ್ ಅಭಿಯಾನ’ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ.ರಮಾನಥ.ರೈ ನೇತೃತ್ವದಲ್ಲಿ ಕರಿಯಂಗಳ ಗ್ರಾಮದ ಮಣಿಕಂಠಪುರದಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ ಸಚಿವ ರಮಾನಥ.ರೈ, ಇಲ್ಲಿನ ಶುಭಾವತಿ ವಾಮನ್ ಪೂಜಾರಿಯವರ ಮನೆಗೆ ಭೇಟಿ ನೀಡಿ, ಮನೆಮನೆಗೆ ಕಾಂಗ್ರಸ್ ಅಭಿಯಾನದ ಸ್ಟಿಕರ್ ಅಂಟಿಸಿ ರಾಜ್ಯದ ಕ್ರಾಂಗೆಸ್ ಸರಕಾರದ ಅಭಿವೃದ್ಧಿ ಬಗ್ಗೆ ಮನಗಂಡು ತನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಉಮೇಶ್ ಆಚಾರ್ಯ ಕರಿಯಂಗಳ, ಚಂದ್ರಹಾಶ ಪಲ್ಲಿಪಾಡಿ, ಪ್ರಸಾದ್ ಗರೋಡಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.



