ಬೆಳ್ಳೂರು: 2016-17ನೇ ಸಾಲಿನ ಅಪೆಂಡಿಕ್ಸ್-ಇ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಲ್ಲಗುಡ್ಡೆ-ಕಮ್ಮಾಜೆ-ಕಾವೇಶ್ವರ-ಪಡೀಲುಬೈಲು ಗ್ರಾಮೀಣ ರಸ್ತೆಗೆ ಕಾವೇಶ್ವರ ದೇವಸ್ಥಾನದ ಬಳಿ ರೂ. 25ಲಕ್ಷ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸವನ್ನು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಪರಿಸರ ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಭಟ್, ಇಂಜಿನಿಯರ್ ಅಮೃತ್ ಕುಮಾರ್, ಗುತ್ತಿಗೆದಾರ ಹಸೈನಾರ್, ಬಡಗಬೆಳ್ಳೂರು ಗ್ರಾ. ಪಂ. ಉಪಾಧ್ಯಕ್ಷ ಯೋಗೀಶ್ ಪೂಜಾರಿ, ದೇವಳದ ಅರ್ಚಕರಾದ ಪ್ರಕಾಶ್ ಭಟ್ , ಸ್ಥಳೀಯರಾದ ನಿವೃತ ಶಿಕ್ಷಕ ಗಂಗಾಧರ ರೈ, ಸತೀಶ ಬೆಳ್ಳೂರು, ಬಾಬು ಪುರುಷ ಮತ್ತಿತರರು ಉಪಸ್ಥಿತರಿದ್ದರು.
