ಸುಳ್ಯ: ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕೇನ್ಯ ಗ್ರಾಮದ ಕೋರಿಯಾರ್ ಕುಮಾರಧಾರ ನದಿಯಲ್ಲಿ ಸೋಮವಾರ ನಡೆದಿದೆ.
ಸುಳ್ಯ ತಾಲೂಕಿನ ಐವತ್ತೊಕ್ಳು ಗ್ರಾಮದ ಕಂಡುರು ನಿವಾಸಿ ನಾರಾಯಣ ಗೌಡ ಅವರ ಪುತ್ರ ಮನೋಜ್ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಮನೆಯ ಕಾಮಗಾರಿಗೆ ಮರಳನ್ನು ತರಲು ಮನೋಜ್ ತನ್ನ ಪೋಷಕರೊಂದಿಗೆ ಕುಮಾರಾಧಾ ನದಿಗೆ ತೆರಳಿದ್ದು, ಮಧ್ಯಾಹ್ನ ವೇಳೆಗೆ ಊಟ ಮುಗಿಸಿ ಕೈತೊಳೆಯಲು ನದಿಗೆ ಇಳಿದ ವೇಳೆ ಆಯ ತಪಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

