ಸುಬ್ರಹ್ಮಣ್ಯ: ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ರಕ್ಷಿತಾರಣ್ಯದ ಮುಂಗುಳಿಪಾದೆಯ ಕುಮಾರಧಾರ ನದಿಯಲ್ಲಿ ನಡೆದಿದೆ.
ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಗಣೇಶ್ ಎಂಬವರ ಪುತ್ರ ಜಯಪ್ರಕಾಶ್(19) ಮೃತಪಟ್ಟ ಯುವಕನೆಂದು ಗುರುತಿಸಲಾಗಿದೆ.
ಬುಧವಾರ ಮೃತ ಯುವಕ ತನ್ನ ಗೆಳೆಯರಾದ ಮಿಥುನ್, ಪ್ರವೀಣ್, ಅನಿಲ್ ಕುಮಾರ್ ಹಾಗೂ ಸತೀಶ್ ಅವರೊಂದಿಗೆ ಇಲ್ಲಿಗೆ ಮೋಜಿಗೆಂದು ಬಂದಿದ್ದು, ಆದರೆ ಊಟದ ಬಳಿಕ ಜಯಪ್ರಕಾಶ್ ನದಿಗೆ ಇಳಿದು ಕಣ್ಮರೆಯಾಗಿದ್ದಾನೆ ಎಂದು ಆತನ ಗೆಳೆಯರು ಸುಬ್ರಹ್ಮಣ್ಯ ಠಾಣೆಗೆ ದೂರುನಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದವರು ಕಾರ್ಯಾಚರಣೆ ಮುಂದುವರೆಸಿ ಗುರುವಾರ ಮಧ್ಯಾಹ್ನ ವೇಳೆಗೆ ಯುವಕನ ಮೃತದೇಹವನ್ನು ಮೇಲೆಕ್ಕೆತ್ತಿದ್ದಾರೆ.
