ಅಡ್ಡೂರು, ಡಿ.14: ಜಿಪಂ ಸದಸ್ಯ ಯು.ಪಿ ಇಬ್ರಾಹೀಂ ನೇತೃತ್ವದಲ್ಲಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.ಈ ವೇಳೆ ಬೆಳ್ಳಿ ಹಬ್ಬದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಮಾಜ ಸೇವಕ, ರಾಜಕೀಯ ಮುಖಂಡ ಟಿ.ಅಹ್ಮದ್ ಬಾವಾ ತೋಕೂರು ಅವರನ್ನು ಆಯ್ಕೆಗೊಳಿಸಲಾಯಿತು.
ಸಭೆಯಲ್ಲಿ ಎಸ್ ಡಿಎಮ್ ಸಿ ಅಧ್ಯಕ್ಷ ಸಿದ್ದೀಕ್ ಕೆಳಗಿನಕೆರೆ, ಶಾಲಾ ಹಿತರಕ್ಷಣ ಸಮಿತಿ ಅಧ್ಯಕ್ಷ ಡಾ.ಇ.ಕೆ.ಸಿದ್ದೀಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ರಿಯಾಝ್ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
