ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12 ನೇ ವರ್ಷದ ಭಜನಾ ಸಂಕೀರ್ತನೆಯು ಡಿ. 30 ರಂದು ಶನಿವಾರ ಉದ್ಘಾಟನೆಗೊಳ್ಳಲಿದೆ. ಬೆಂಜನಪದವಿನ ಉದ್ಯಮಿ ಉಮೇಶ್ ಸಾಲಿಯಾನ್ ದೀಪ ಬೆಳಗಿಸಿ ಉದ್ಘಾಟನೆ ಮಾಡಲಿದ್ದಾರೆ.
ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಶನಿವಾರ ಸೂರ್ಯಾಸ್ತದಿಂದ ಮರುದಿನ ಭಾನುವಾರ ಸೂರ್ಯೊದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಹಾಗೂ ಡಿ.31 ರಂದು ಭಾನುವಾರ ಮಧ್ಯಾಹ್ನ 12.30 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ನಂತರ ಅನ್ನದಾನ ಜರುಗಲಿದೆ. ಎಂದು ಮಣಿಕಂಠ ಭಜನಾಮಂದಿರದ ಪ್ರಕಟನೆ ತಿಳಿಸಿದೆ.
