ಬಿ.ಸಿ.ರೋಡು:ಬಂಟ್ವಾಳ ತಾಲೂಕು ಸೇವಾ ಭಾರತಿ ಗೋಕುಲೋತ್ಸವದ ಪೂರ್ವ ಭಾವಿ ಸಭೆಯು ಬಿ.ಸಿ.ರೋಡು ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿತು. ಡಿ.25ರಂದು ಬೆಳಗ್ಗೆ 9.ಗಂಟೆಗೆ ಗೋಕುಲೋತ್ಸವವನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಚಾಲನೆ ನೀಡಿ ಕಾರ್ಯಕ್ರಮದ ಉದ್ಘಾಟನೆಯನ್ನು 10ಗಂಟೆಗೆ ನೆರವೇರಿಸಲಿದ್ದಾರೆ.ಶೋಭಾಯಾತ್ರೆಯು ಬಿ.ಸಿ.ರೋಡು ನಾರಾಯಣಗುರು ವೃತ್ತದಿಂದ ಅಜ್ಜಿಬೆಟ್ಟು ಶಿಶುಮಂದಿರದ ತನಕ ಭವ್ಯ ಶೋಭಾಯತ್ರೆ ಜರುಗಲಿದೆಎಂದರು.
ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಎಸ್.ವಿ.ಎಸ್ ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ವಿಟ್ಲ ಮೈತ್ರೇಯಿ ಗುರುಕುಲದ ಅಮೃತವರ್ಷಿಣಿ ಮಾತಾಜಿಯವರು ಭಾಷಣಮಾಡಲಿದ್ದಾರೆ. ಮುಖ್ಯ ಅಥಿತಿಯಾಗಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿತ್ಯಪ್ರಕಾಶ್ ಬಂಟ್ವಾಳ್ ಭಾಗವಹಿಸಲಿದ್ದಾರೆ. ಬಾಲಗೋಕುಲೋತ್ಸವದಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಬಾಲಗೋಕುಲಗಳ ಮಕ್ಕಳು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾತಾಜಿಯವರು ಹಾಗೂ ಪೂಷಕರು ಸಹಕರಿಸಬೇಕು ಸುಮಾರು ಒಂದು ಸಾವಿರ ಜನರು ಭಾಗವಹಿಸುವರು ಎಂದರು.
ಪ್ರಭಾಕರ ಪೈ ಬಂಟ್ವಾಳ, ಜಿ.ಕೆ.ಭಟ್,ವಿನೋದ್ ಕೊಡ್ಮಾಣ್, ದಾಮೋದರ ನೆತ್ತರಕೆರೆ ಸಭೆಯಲ್ಲಿ ಭಾಗವಹಿಸಿದ್ದರು.
